ADVERTISEMENT

ಅಶ್ವನಿಗೆ ಅಸೋಚಾಂ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ಬೆಂಗಳೂರು: ಭಾರತೀಯ ವಾಣಿಜ್ಯೋ­ದ್ಯಮ ಮಹಾಸಂಘ (ಅಸೋಚಾಂ) ‘ಅಗ್ಗದ ದರ ಶ್ರೇಣಿ’ ಮನೆಗೆ ನೀಡುವ ಪ್ರಶಸ್ತಿ ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಸಂಸ್ಥೆ ಅಶ್ವನಿ ಪ್ರಾಪರ್ಟೀಸ್‌ಗೆ ಲಭಿಸಿದೆ.

‘ರೂ. 25 ಸಾವಿರದಿಂದ ರೂ. 45 ಸಾವಿರ ದೊಳಗಿನ ವರಮಾನದ, ಮಧ್ಯಮ ವರ್ಗದವರೇ ‘ಅಗ್ಗದ ದರ ಶ್ರೇಣಿ’ ಮನೆ ಗಳ ಗ್ರಾಹಕರು. ಸಂಸ್ಥೆ ಬೆಂಗ­ಳೂರಿನ ಸರ್ಜಾಪುರ, ಎಲೆಕ್ಟ್ರಾ­ನಿಕ್‌ ಸಿಟಿಯಲ್ಲಿ ‘ಆಯೇಶಾ’ ಮತ್ತು ‘ಸನ್‌ಶೈನ್‌’ ಯೋಜನೆ ಕೈಗೆತ್ತಿ­ಕೊಂ­ಡಿದೆ. 2 ಮತ್ತು 3 ಬೆಡ್‌ರೂಂ ಮನೆ ಬೆಲೆ ಕ್ರಮವಾಗಿ ರೂ. 11.71 ಲಕ್ಷ ಮತ್ತು ರೂ. 17.02 ಲಕ್ಷ ದಿಂದ ಆರಂಭ ಎಂದು ಸಂಸ್ಥೆಯ ವ್ಯವ ಸ್ಥಾಪಕ ನಿರ್ದೇಶಕ ಸಿ.ಆನಂದ ರೆಡ್ಡಿ ಬುಧ­ವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.