ADVERTISEMENT

ಆಭರಣಕ್ಕೆ ವಿನ್ಯಾಸ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2011, 18:30 IST
Last Updated 26 ಜನವರಿ 2011, 18:30 IST
ಆಭರಣಕ್ಕೆ ವಿನ್ಯಾಸ ಪ್ರಶಸ್ತಿ
ಆಭರಣಕ್ಕೆ ವಿನ್ಯಾಸ ಪ್ರಶಸ್ತಿ   

ಬೆಂಗಳೂರು:  ಚಿನ್ನಾಭರಣ ತಯಾರಿಕೆಯ ಖ್ಯಾತ ಸಂಸ್ಥೆ ‘ಆಭರಣ’ಕ್ಕೆ ಅತ್ಯುತ್ತಮ ವಿನ್ಯಾಸಕ್ಕಾಗಿ 2011ನೇ ಸಾಲಿನ ‘ರಾಷ್ಟ್ರೀಯ ಚಿನ್ನಾಭರಣ ಪ್ರಶಸ್ತಿ’ ಪಡೆದುಕೊಂಡಿದೆ.

ದೇಶೀಯ ಚಿನ್ನಾಭರಣ ವಹಿವಾಟಿನಲ್ಲಿ ಈ ಪ್ರಶಸ್ತಿಯು ಹಾಲಿವುಡ್‌ನ ‘ಆಸ್ಕರ್’ ಪ್ರಶಸ್ತಿಗೆ ಸಮನಾಗಿದ್ದು, ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಪ್ರತಾಪ್ ಅವರು ಪ್ರಶಸ್ತಿ ಸ್ವೀಕರಿಸಿದರು. ‘ಆಭರಣ’ವು  ‘ಐಎಸ್‌ಒ 9001’ ಮಾನ್ಯತೆ ಪಡೆದ ರಾಜ್ಯದ ಮೊದಲ ಚಿನ್ನಾಭರಣ ವಹಿವಾಟು ಸಂಸ್ಥೆಯಾಗಿದ್ದು, ಪಾರಂಪರಿಕ ‘ವಧು’ ಆಭರಣಗಳ ವ್ಯಾಪಕ ಸಂಗ್ರಹಕ್ಕೂ ಹೆಸರುವಾಸಿಯಾಗಿದೆ. ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿನ  ಇಸ್ಕಾನ್ ದೇವಸ್ಥಾನದ ಎದುರು ‘ಆಭರಣ’ದ ಷೋರೂಂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.