ADVERTISEMENT

ಆರ್ಥಿಕ ವೃದ್ಧಿ ದರ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): 2010-11ನೇ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರವನ್ನು ಕೇಂದ್ರ ಸರ್ಕಾರವು ಪರಿಷ್ಕರಿಸಿದ್ದು, ಈ ಮೊದಲಿನ ಶೇ 8.5ರ ಬದಲಿಗೆ ಶೇ 8.4ರಷ್ಟು ಆರ್ಥಿಕ ಬೆಳವಣಿಗೆ ದಾಖಲಿಸಿದೆ ಎಂದು ಹೇಳಿದೆ.

ಬೆಲೆ ಸ್ಥಿರತೆ ಆಧರಿಸಿ ಹಿಂದಿನ ವರ್ಷದ ವೃದ್ಧಿ ದರಕ್ಕೆ ಹೋಲಿಸಿದರೆ `ಜಿಡಿಪಿ~ಯು ಶೇ 8.4ರಷ್ಟು ದಾಖಲಾಗಿದೆ ಎಂದು ಅಂಕಿ ಸಂಖ್ಯೆ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯ ತಿಳಿಸಿದೆ.

`ಜಿಡಿಪಿ~ ವೃದ್ಧಿಗೆ ಸೇವಾ ವಲಯವು ಪ್ರಮುಖ ಕೊಡುಗೆ ನೀಡುತ್ತಿದೆ. ಈ ವಲಯವು  ಶೇ 9.3ರ ದರದಲ್ಲಿ ಬೆಳವಣಿಗೆ ದಾಖಲಿಸಿದೆ. 2010-11ನೇ ಸಾಲಿನಲ್ಲಿ ಕೃಷಿ ಬೆಳವಣಿಗೆ ಕೂಡ ಶೇ 7ರಷ್ಟು ವೃದ್ಧಿ ಕಂಡಿದೆ.

ತಯಾರಿಕೆ, ಕಟ್ಟಡ ನಿರ್ಮಾಣ ರಂಗಗಳೂ ಶೇ 7.2ರಷ್ಟು ವೃದ್ಧಿ ದಾಖಲಿಸಿವೆ. ಹಣಕಾಸು, ವಿಮೆ, ರಿಯಲ್ ಎಸ್ಟೇಟ್ ಮತ್ತು ಉದ್ದಿಮೆ ವಹಿವಾಟು ಸೇವೆಗಳು ಶೇ 10.4ರಷ್ಟು ಬೆಳವಣಿಗೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.