ADVERTISEMENT

ಇಂಟರ್‌ನೆಟ್ ಸೇವಾ ಗುಣಮಟ್ಟ ವೃದ್ಧಿಗೆ ಸ್ಯಾಂಡ್‌ವಿನ್ ನೆರವು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2011, 19:00 IST
Last Updated 26 ಆಗಸ್ಟ್ 2011, 19:00 IST
ಇಂಟರ್‌ನೆಟ್ ಸೇವಾ ಗುಣಮಟ್ಟ ವೃದ್ಧಿಗೆ ಸ್ಯಾಂಡ್‌ವಿನ್ ನೆರವು
ಇಂಟರ್‌ನೆಟ್ ಸೇವಾ ಗುಣಮಟ್ಟ ವೃದ್ಧಿಗೆ ಸ್ಯಾಂಡ್‌ವಿನ್ ನೆರವು   

ಬೆಂಗಳೂರು: ಕೆನಡಾ ಮೂಲದ ಬ್ರಾಡ್‌ಬ್ಯಾಂಡ್ ಸಂಪರ್ಕ ಸೇವಾ ಸಂಸ್ಥೆ ಸ್ಯಾಂಡ್‌ವಿನ್, ಭಾರತದಲ್ಲಿನ ಇಂಟರ್‌ನೆಟ್ ಸೇವೆ ಒದಗಿಸುವ ಸಂಸ್ಥೆಗಳಿಗೆ ತನ್ನ ಸೇವೆ ವಿಸ್ತರಿಸಲು ಬೆಂಗಳೂರಿನಲ್ಲಿ ಕಚೇರಿ ಆರಂಭಿಸಿದೆ.

ಭಾರತದಲ್ಲಿ ಅಂತರಜಾಲ ಮಾರುಕಟ್ಟೆ ತೀವ್ರವಾಗಿ ಬೆಳೆಯುತ್ತಿದ್ದು, ಇಂಟರ್‌ನೆಟ್ ಸೇವೆಗಳ ಗುಣಮಟ್ಟ ಹೆಚ್ಚಿಸಲು ಸ್ಯಾಂಡ್‌ವಿನ್ ನೆರವಾಗಲಿದೆ ಎಂದು ಸಂಸ್ಥೆಯ ಸಹ ಸ್ಥಾಪಕ ಬ್ರಾಡ್ ಸಿಮ್, ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸ್ಥೆಯು ವಿಶ್ವದಾದ್ಯಂತ 200ರಷ್ಟು ಇಂಟರ್‌ನೆಟ್ ಸೇವಾ ಸಂಸ್ಥೆಗಳಿಗೆ ನೆರವಾಗುತ್ತಿದೆ. ಈ ಸಂಸ್ಥೆಗಳ ಸೇವೆಯು ಉತ್ತಮ ಗುಣಮಟ್ಟದಿಂದ ಇರುವುದಕ್ಕೆ  ಸಂಸ್ಥೆಯ ಉತ್ಪನ್ನಗಳು ಮತ್ತು ಸೇವೆ ಅಗತ್ಯ ಸಹಾಯ ಒದಗಿಸುತ್ತಿವೆ. 85 ದೇಶಗಳಲ್ಲಿ ಸಂಸ್ಥೆಯ ವಹಿವಾಟು ಯಶಸ್ವಿಯಾಗಿದೆ. ಭಾರತದಲ್ಲಿನ ಬ್ರಾಡ್ ಬ್ಯಾಂಡ್ ಸೇವೆಯ ಗುಣಮಟ್ಟ ಹೆಚ್ಚಿಸಲೂ ಸಂಸ್ಥೆ ನೆರವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.