ADVERTISEMENT

ಇನ್ಫೋಸಿಸ್‌ ನೂತನ ಸಿಇಒ ಆಗಿ ಸಲಿಲ್‌ ನೇಮಕ

ಏಜೆನ್ಸೀಸ್
Published 2 ಡಿಸೆಂಬರ್ 2017, 11:36 IST
Last Updated 2 ಡಿಸೆಂಬರ್ 2017, 11:36 IST
ಇನ್ಫೋಸಿಸ್‌ ನೂತನ ಸಿಇಒ ಆಗಿ ಸಲಿಲ್‌ ನೇಮಕ
ಇನ್ಫೋಸಿಸ್‌ ನೂತನ ಸಿಇಒ ಆಗಿ ಸಲಿಲ್‌ ನೇಮಕ   

ಬೆಂಗಳೂರು: ಇನ್ಫೋಸಿಸ್‌ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಸಲಿಲ್‌ ಎಸ್‌ ಪರೇಖ್‌ ಅವರನ್ನು ಸಂಸ್ಥೆಯ ನಿರ್ದೇಶಕ ಮಂಡಳಿ ಶನಿವಾರ ನೇಮಕ ಮಾಡಿದೆ.

ಐಟಿ ಸೇವಾ ಕ್ಷೇತ್ರದಲ್ಲಿ 30 ವರ್ಷಗಳ ಅನುಭವ ಹೊಂದಿರುವ ಸಲಿಲ್‌ ಸಂಸ್ಥೆಯ ಸಿಇಒ ಮತ್ತು ಎಂಡಿ ಆಗಿ 2018ರ ಜನವರಿ 2ರಿಂದ ಅಧಿಕಾರ ವಹಿಸಲಿದ್ದಾರೆ. 'ಐಟಿ ಕ್ಷೇತ್ರದ ಬದಲಾವಣೆಯ ಕಾಲದಲ್ಲಿ ಇನ್ಫೋಸಿಸ್‌ ಮುನ್ನಡೆಸಲು ಸಲಿಲ್‌ ಉತ್ತಮ ಆಯ್ಕೆ' ಎಂದು ಸಂಸ್ಥೆಯ ನಿರ್ದೇಶಕ ಮಂಡಳಿ ಅಧ್ಯಕ್ಷ ನಂದನ್‌ ನಿಲೇಕಣಿ ಅಭಿಪ್ರಾಯ ಪಟ್ಟಿದ್ದಾರೆ.

ಸಲಿಲ್‌ ಅವರು ಕಾರ್ನೆಲ್‌ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್‌ ಸೈನ್ಸ್‌ ಮತ್ತು ಮೆಕಾನಿಕಲ್‌ ಇಂಜಿನಿಯರಿಂಗ್‌ ಸ್ನಾತಕೋತ್ತರ ಪದವಿ, ಬಾಂಬೆ ಐಐಟಿಯಲ್ಲಿ ಏರೋನಾಟಿಕಲ್‌ ಇಂಜಿನಿಯರಿಂಗ್‌ ಬಿ.ಟೆಕ್‌ ಪದವಿ ಹೊಂದಿದ್ದಾರೆ. ಅವರು ಫ್ರೆಂಚ್‌ ಐಟಿ ಸೇವಾ ಸಂಸ್ಥೆ ಕ್ಯಾಪ್‌ಜೆಮಿನಿಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದರು.

ADVERTISEMENT

ಆಡಳಿತ ಮಂಡಳಿ ಜತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಆಗಸ್ಟ್‌ನಲ್ಲಿ ವಿಶಾಲ್‌ ಸಿಕ್ಕಾ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಯು.ಬಿ. ಪ್ರವೀಣ್‌ ರಾವ್‌ ಅವರನ್ನು ಹಂಗಾಮಿ ಸಿಇಒ, ಎಂಡಿ ಆಗಿ ನೇಮಕ ಮಾಡಲಾಗಿತ್ತು. ಪ್ರವೀಣ್‌ ರಾವ್‌ ಸಿಒಒ ಹಾಗೂ ಸಂಸ್ಥೆಯ ಪೂರ್ಣಾವಧಿ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.