ADVERTISEMENT

ಇನ್ಫೋಸಿಸ್ ಬಿಪಿಒ ವಶಕ್ಕೆ ಪೋರ್ಟ್‌ಲ್ಯಾಂಡ್ ಗ್ರೂಪ್

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 19:30 IST
Last Updated 1 ಜನವರಿ 2012, 19:30 IST

ಬೆಂಗಳೂರು: ದೇಶದ 2ನೇ ಅತಿದೊಡ್ಡ ಸಾಫ್ಟ್‌ವೇರ್ ರಫ್ತು ಸಂಸ್ಥೆಯಾಗಿರುವ ಇನ್ಫೋಸಿಸ್‌ನ ಹೊರಗುತ್ತಿಗೆ (ಬಿಪಿಒ) ವಿಭಾಗವು, ಆಸ್ಟ್ರೇಲಿಯಾ ಮೂಲದ ಪೋರ್ಟ್‌ಲ್ಯಾಂಡ್ ಗ್ರೂಪ್ ಅನ್ನು 3.7 ಕೋಟಿ ಡಾಲರ್‌ಗಳಿಗೆ (ರೂ. 195.44 ಕೋಟಿ) ಸ್ವಾಧೀನಪಡಿಸಿಕೊಳ್ಳಲಿದೆ.

ಈ ಸ್ವಾಧೀನ ಪ್ರಕ್ರಿಯೆ 2012ರ ಜನವರಿ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು `ಇನ್ಫೋಸಿಸ್ ಬಿಪಿಒ~ದ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಸ್ವಾಮಿ ಸ್ವಾಮಿನಾಥನ್ ತಿಳಿಸಿದ್ದಾರೆ.ಸಿಡ್ನಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪೋರ್ಟ್‌ಲ್ಯಾಂಡ್ ಗ್ರೂಪ್, ಮೆಲ್ಬರ್ನ್, ಬ್ರಿಸ್ಬೇನ್ ಮತ್ತು  ಪರ್ತ್‌ಗಳಲ್ಲಿ ಕಚೇರಿ ಹೊಂದಿದ್ದು, 113  ತಂತ್ರಜ್ಞರನ್ನು ಒಳಗೊಂಡಿದೆ.

`ಇನ್ಫೋಸಿಸ್ ಬಿಪಿಒ~ದ ಮೂರನೇ ಸ್ವಾಧೀನ ಯತ್ನ ಇದಾಗಿದೆ. 2007ರಲ್ಲಿ  ಡೆನ್ಮಾರ್ಕ್‌ನ ಗ್ರಾಹಕ ಸರಕುಗಳ ದೈತ್ಯ ಸಂಸ್ಥೆ ಫಿಲಿಪ್ಸ್ ಜತೆ 7 ವರ್ಷಗಳ ಒಪ್ಪಂದಕ್ಕೆ ಅಂಕಿತ ಹಾಕಿತ್ತು. ಒಪ್ಪಂದದ ಅನ್ವಯ, ಭಾರತ, ಪೋಲಂಡ್ ಮತ್ತು ಥಾಯ್ಲೆಂಡ್‌ನಲ್ಲಿನ ಫಿಲಿಪ್ಸ್‌ನ ಹೊರಗುತ್ತಿಗೆ ಕೇಂದ್ರಗಳನ್ನು ಸ್ವಾಧೀನಪಡಿಸಿಕೊಂಡಿತ್ತು. 2009ರಲ್ಲಿ ಅಟ್ಲಾಂಟಾ ಮೂಲದ ಮ್ಯಾಕ್‌ಮಿಷ್ ಸಿಸ್ಟಮ್ಸ ಅನ್ನು 38 ದಶಲಕ್ಷ ಡಾಲರ್‌ಗಳಿಗೆ (ಅಂದಾಜು ರೂ.180 ಕೋಟಿಗಳಿಗೆ) ಸ್ವಾಧೀನಪಡಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.