ADVERTISEMENT

ಇನ್ಫೋಸಿಸ್‌ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಶಾಲ್‌ ಸಿಕ್ಕಾ ಬಗ್ಗೆ ನಿಮಗೆ ಗೊತ್ತಿಲ್ಲದ 10 ಸಂಗತಿಗಳು

ಏಜೆನ್ಸೀಸ್
Published 18 ಆಗಸ್ಟ್ 2017, 9:45 IST
Last Updated 18 ಆಗಸ್ಟ್ 2017, 9:45 IST
ಇನ್ಫೋಸಿಸ್‌ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಶಾಲ್‌ ಸಿಕ್ಕಾ ಬಗ್ಗೆ ನಿಮಗೆ ಗೊತ್ತಿಲ್ಲದ 10 ಸಂಗತಿಗಳು
ಇನ್ಫೋಸಿಸ್‌ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಶಾಲ್‌ ಸಿಕ್ಕಾ ಬಗ್ಗೆ ನಿಮಗೆ ಗೊತ್ತಿಲ್ಲದ 10 ಸಂಗತಿಗಳು   

ಬೆಂಗಳೂರು: ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ವಿಶಾಲ್‌ ಸಿಕ್ಕಾ ಅವರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ. ಅದರ ಬೆನ್ನಲ್ಲೇ ಅವರನ್ನು ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹುದ್ದೆಗೆ ನೇಮಿಸಲಾಗಿದೆ.

ಮೂರು ವರ್ಷಗಳ ಕಾಲ ಸಂಸ್ಥೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದ ಅವರ ಬಗ್ಗೆ ಒಂದಿಷ್ಟು

* ಜನಿಸಿದ್ದು ಮಧ್ಯಪ್ರದೇಶದಲ್ಲಿ. ಇವರ ತಂದೆ ಭಾರತೀಯ ರೈಲ್ವೆ ಇಲಾಖೆ ಅಧಿಕಾರಿಯಾಗಿದ್ದರು. ತಾಯಿ ಶಿಕ್ಷಕಿ

ADVERTISEMENT

* ವಡೋದರಾದ ಮಹಾರಾಜ ಸಯ್ಯಾಜಿ ರಾವ್‌ ವಿವಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ ಪದವಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದ ಸಿಕ್ಕಾ ಅವರು, ನ್ಯೂಯಾರ್ಕ್‌ನ ಸೈರಕ್ಯೂಸ್ ವಿವಿಯಿಂದ ಕಂಪ್ಯೂಟರ್ ಸಯನ್ಸ್ ವಿಷಯದಲ್ಲಿ ಬಿಎಸ್‌  ಪದವಿ ಪಡೆದರು. ನಂತರ ಸ್ಯಾನ್‌ಫೋರ್ಡ್‌ ವಿವಿಯಿಂದ ಪಿಹೆಚ್‍ಡಿ.

* ಕಂಪೆನಿ ಅಭಿವೃದ್ಧಿ ಹಾಗೂ ಇ– ಕಾಮರ್ಸ್‌ಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುವ ‘ಬೋಧಾ.ಕಾಮ್‌’ ಮತ್ತು ‘ಐಬ್ರೇನ್‌ ಸಾಫ್ಟ್‌ವೇರ್‌’ ಸ್ಟಾರ್ಟ್‌ಅಪ್‌ ಅಭಿವೃದ್ಧಿ

* ಆರಂಭದ ದಿನಗಳಲ್ಲಿ ಜೆರಾಕ್ಸ್‌ ಪೋಲೋ ಆಲ್ಟೋ ಲ್ಯಾಬ್ಸ್‌ ಹಾಗೂ  ಕಾಮರ್ಸ್ ನೆಟ್, ಸ್ಯಾನ್‌ಫೋರ್ಡ್‌ನಲ್ಲಿ ವಿವಿಯಲ್ಲಿ ಸಂಶೋಧನಾ ವಿಭಾಗದಲ್ಲಿ ಕಾರ್ಯ ನಿರ್ವಹಣೆ

* 2002ರಿಂದ 2014ರ ವರೆಗೆ ಜರ್ಮನ್‌ ಬಹುರಾಷ್ಟ್ರೀಯ ಸಾಫ್ಟ್ ವೇರ್  ಕಂಪೆನಿ ‘SAP SE’ ನಲ್ಲಿ ಕಾರ್ಯನಿರ್ವಹಣೆ. 2007ರಲ್ಲಿ SAP SE’ಯ ಮುಖ್ಯ ತಾಂತ್ರಿಕಾಧಿಕಾರಿಯಾಗಿ ಬಡ್ತಿ ಮತ್ತು 2010ರಲ್ಲಿ ಕಂಪೆನಿಯ ಕಾರ್ಯಕಾರಿಣಿ ಮಂಡಳಿಗೆ ಸೇರ್ಪಡೆ.

* SAP ಸಂಪೂರ್ಣ ತಾಂತ್ರಿಕ ಅಭಿವೃದ್ಧಿ, ಉತ್ಪಾದಕ ಕಾರ್ಯತಂತ್ರಗಳ ನಿರ್ವಹಣೆ ಮತ್ತು ಸೇವೆಗಳನ್ನು ಗ್ರಾಹಕರ ಅಗತ್ಯಕ್ಕನುಸಾರವಾಗಿ ವಿನ್ಯಾಸಗೊಳಿಸುವಲ್ಲಿ ನಿರಂತರ ಶ್ರಮಿಸಿದ ಶ್ರೇಯ

* ಸಾಪ್‌ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಸಾಧಿಸಿದ ಇನ್ ಮೆಮೊರಿ ಡೇಟಾ ಫ್ಲಾಟ್‍ಫಾರಂ ‘SAP HANA’ ರೂವಾರಿ.

* ಯಾವುದೇ ಅಡೆತಡೆಗಳಿಲ್ಲದೆ ತಂತ್ರಾಂಶಗಳನ್ನು ಅಪ್‌ಡೇಟ್‌ಮಾಡಿಕೊಳ್ಳಲು ಗ್ರಾಹಕರಿಗೆ ಮೊದಲ ಆದ್ಯತೆ ನೀಡುವ ‘ಟೈಮ್‌ಲೆಸ್‌ ತಂತ್ರಾಂಶ’ ಪರಿಕಲ್ಪನೆಯನ್ನು ಪರಿಚಯಿಸಿದರು 

* 2014ರಲ್ಲಿ ಸಿಇಓ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಇನ್ಫೋಸಿಸ್‌ಗೆ ಸೇರ್ಪಡೆ. ಸಂಸ್ಥೆಯಲ್ಲಿ ಜಾರಿಯಾಗುವ ಪ್ರತಿಯೊಂದು ಯೋಜನೆಗಳನ್ನು ಪ್ರತಿ ಗ್ರಾಹಕರಿಗೆ ತಲುಪಿಸುವ ‘ಶೂನ್ಯ ಅಂತರ’ ಪರಿಕಲ್ಪನೆಯನ್ನು ಜಾರಿಗೊಳಿಸುವುದರೊಟ್ಟಿಗೆ, ಯಾಂತ್ರೀಕೃತ ಹಾಗೂ ಕೃತಕ ಬುದ್ಧಿಮತ್ತೆಯನ್ನು ಬಳಸಿ ಸಂಸ್ಥೆಯ ಹೆಚ್ಚುವರಿ ವೆಚ್ಚಕ್ಕೆ ಕಡಿವಾಣ.

* ಸಂಸ್ಥೆಯ ಸ್ಥಾಪಕರು ಹಾಗೂ ಪ್ರಾಥಮಿಕ ಹೂಡಿಕೆದಾರರ ಜತೆಗೆ ವಿವಾದಗಳು ಸೃಷ್ಟಿ. ಸಂಸ್ಥೆಯ ಕೆಲ ಉನ್ನತಾಧಿಕಾರಿಗಳಿಗೆ ಉದಾರವಾಗಿ ಪರಿಹಾರ ನೀಡಿರುವುದರ ಬಗ್ಗೆ ಸಂಸ್ಥೆಯ ಸಹ ಸ್ಥಾಪಕರು ಕಳವಳ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.