ADVERTISEMENT

ಇಳಿಯುತ್ತಿರುವ ಚಿನ್ನದ ಧಾರಣೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST

ಮುಂಬೈ (ಪಿಟಿಐ): ಡಾಲರ್ ಎದುರು ಸ್ಥಿರಗೊಳ್ಳುತ್ತಿರುವ ರೂಪಾಯಿ ವಿನಿಮಯ ಮೌಲ್ಯ, ಷೇರುಪೇಟೆಗಳಲ್ಲಿನ ಚೇತರಿಕೆ ಇತ್ಯಾದಿ ಕಾರಣಗಳಿಂದ ಚಿನ್ನದ ಧಾರಣೆ ಕಳೆದ ಮೂರು ವಾರಗಳಿಂದ ಇಳಿಕೆ ಕಾಣುತ್ತಿದೆ.

ಶನಿವಾರ ಇಲ್ಲಿ 99.5 ಶುದ್ಧತೆಯ 10 ಗ್ರಾಂ ಸ್ಟಾಂಡರ್ಡ್ ಚಿನ್ನದ ಬೆಲೆ  ರೂ30,940ಕ್ಕೆ  ಇಳಿಕೆ ಕಂಡಿದೆ. ಇದು ಒಂದು ತಿಂಗಳ ಹಿಂದಿನ ದರ. ಬೆಳ್ಳಿ ಧಾರಣೆ ಕೆ.ಜಿಗೆ ರೂ260 ಕುಸಿದಿದ್ದು, ರೂ61,500ರಷ್ಟಾಗಿದೆ.


ನವದೆಹಲಿ ವರದಿ:  ಚಿನ್ನದ ಧಾರಣೆ ಇಲ್ಲಿನ ಚಿನಿವಾರ ಪೇಟೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ಇಳಿಕೆ ಕಾಣುತ್ತಿದೆ. ಶನಿವಾರ 10 ಗ್ರಾಂ ಸ್ಟಾಂಡರ್ಡ್ ಚಿನ್ನದ ಬೆಲೆ ರೂ40 ಇಳಿಕೆ ಕಂಡಿದ್ದು ರೂ31,480 ರಷ್ಟಾಗಿದೆ.
ಅಂತರರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಚಿನ್ನದ ಧಾರಣೆ ಪ್ರತಿ  ಔನ್ಸ್‌ಗೆ 1,780 ಡಾಲರ್‌ಗಳಿಗೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT