ADVERTISEMENT

ಈರುಳ್ಳಿ ಕುಸಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಸರ್ಕಾರ ಈರುಳ್ಳಿ ರಫ್ತಿನ ಮೇಲೆ ವಿಧಿಸಿದ್ದ ನಿಷೇಧವನ್ನು ಇತ್ತೀಚೆಗೆ ತೆಗೆದು ಹಾಕಿದ್ದರೂ, ಸಾಗರೋತ್ತರ ಮಾರುಕಟ್ಟೆಯಲ್ಲಿ ಚೀನಾ ಮತ್ತು ಪಾಕಿಸ್ತಾನದ ಈರುಳ್ಳಿ ಸ್ಪರ್ಧೆ ಹೆಚ್ಚಿದ್ದು, ಭಾರತದ ಈರುಳ್ಳಿಗೆ ಬೇಡಿಕೆ ಕುಸಿದಿದೆ.

ಚೀನಾದ ನಂತರ ಪ್ರಪಂಚದಲ್ಲಿಯೇ ಅತಿ ಹೆಚ್ಚು ಈರುಳ್ಳಿ ಉತ್ಪಾದಿಸುವ ದೇಶ ಭಾರತ. ಗಲ್ಫ್ ದೇಶಗಳು, ಸಿಂಗಪುರ, ಮಲೇಷ್ಯಾ, ಶ್ರೀಲಂಕಾ, ಇಂಡೋನೇಷ್ಯಾದಲ್ಲಿ ಭಾರತದ ಈರುಳ್ಳಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ, ಹೆಚ್ಚಿನ ಬೆಲೆ ಮತ್ತು ಅಸ್ಥಿರ ನೀತಿಗಳಿಂದ ದೇಶದ ಈರುಳ್ಳಿ ಬೇಡಿಕೆ ಕುಸಿದಿದೆ ಎಂದು ಮುಂಬೈ ಮೂಲದ ಕೃಷಿ ಉತ್ಪನ್ನ ರಫ್ತು ಒಕ್ಕೂಟವೊಂದು ಅಭಿಪ್ರಾಯಪಟ್ಟಿದೆ.

ಈರುಳ್ಳಿ ನಿಷೇಧ ಹಿಂದೆ ಪಡೆದ ನಂತರ ಕಳೆದ ಒಂದು ವಾರದಲ್ಲಿ 5 ರಿಂದ 6 ಸಾವಿರ ಟನ್ ಈರುಳ್ಳಿ ರಫ್ತು ಮಾಡಲಾಗಿದೆ. ಸದ್ಯ ಸರ್ಕಾರ ಪ್ರತಿ ಟನ್ ಈರುಳ್ಳಿಗೆ 475 ಡಾಲರ್ ( ್ಙ23,750) ಕನಿಷ್ಠ ರಫ್ತು ದರ ನಿಗದಿಪಡಿಸಿದೆ. ಆದರೆ, ಚೀನಾ ಮತ್ತು ಪಾಕಿಸ್ತಾನದ ಈರುಳ್ಳಿ  ಪ್ರತಿ ಟನ್‌ಗೆ 300 (್ಙ15,000) ಮತ್ತು 325 (್ಙ16,250) ಡಾಲರ್‌ನಂತೆ ಸಾಗರೋತ್ತರ ಮಾರುಕಟ್ಟೆಯಲ್ಲಿ ವಹಿವಾಟಾಗುತ್ತಿದೆ.

ದೇಶದ ಈರುಳ್ಳಿ ರಫ್ತು ಕೆಲ ಕಾಲ ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ಸಿಂಗಪುರ ವಹಿವಾಟುದಾರರು ಚೀನಾ ಮತ್ತು ಪಾಕಿಸ್ತಾನ ವರ್ತಕರ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದು ಕೂಡ ಈರುಳ್ಳಿ ಬೇಡಿಕೆ ಕುಸಿಯಲು ಪ್ರಮುಖ ಕಾರಣ. 2009-10ನೇ ಸಾಲಿನಲ್ಲಿ ಒಟ್ಟು 9.34 ಲಕ್ಷ ಟನ್ ಈರುಳ್ಳಿ ರಫ್ತು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.