ADVERTISEMENT

ಈರುಳ್ಳಿ ಮತ್ತೆ ಏರಿಕೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2013, 19:59 IST
Last Updated 15 ಸೆಪ್ಟೆಂಬರ್ 2013, 19:59 IST

ಮುಂಬೈ(ಐಎಎನ್‌ಎಸ್‌):  ಈಗಾಗಲೇ ದುಬಾರಿಯಾಗಿರುವ ಈರುಳ್ಳಿ, ಪ್ರಸ್ತುತ ಆವಕ ಕಡಿಮೆ ಆಗಿರುವುದರಿಂದ ಮತ್ತಷ್ಟು ತುಟ್ಟಿಯಾಗಲಿದೆ ಎಂದು ನಾಸಿಕ್‌ನ ‘ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ’(ಎಪಿಎಂಸಿ) ಭಾನುವಾರ ಹೇಳಿದೆ.

ದೇಶದ ಪ್ರಮುಖ ಈರುಳ್ಳಿ ಮಾರು ಕಟ್ಟೆ ಎನಿಸಿಕೊಂಡಿರುವ ನಾಸಿಕ್‌ನಲ್ಲಿ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಈರುಳ್ಳಿ ಧಾರಣೆ ಕ್ವಿಂಟಲ್‌ಗೆ ದಾಖಲೆಯ ರೂ.4800 ಬೆಲೆ ಪಡೆಯಿತು. ನಂತರ ಇದು ಚಿಲ್ಲರೆ ವಹಿವಾಟು ಮಾರುಕಟ್ಟೆ ಯಲ್ಲಿ ಕೆ.ಜಿ. ಈರುಳ್ಳಿ ಬೆಲೆ ರೂ.55ರಿಂದ 65ಕ್ಕೆ ಏರುವಂತೆ ಮಾಡಿತು.

ಈಗ ಮತ್ತೆ ಈರುಳ್ಳಿ ಆವಕ ಕಡಿಮೆ ಆಗಿದೆ, ಧಾರಣೆ ಏರುಮುಖವಾಗಿದೆ. ಕಳೆದ ಗುರುವಾರ ಕ್ವಿಂಟಲ್‌ಗೆ ರೂ.4500 ರಿಂದ 4651ರಷ್ಟಿದ್ದ ಧಾರಣೆ, ಶುಕ್ರವಾ ರದ ವಹಿವಾಟಿನಲ್ಲಿ ರೂ.4725ರಿಂದ ರೂ.4800ರ ಮಟ್ಟಕ್ಕೇರಿತು. ಜತೆಗೆ ನವ ರಾತ್ರಿ, ದುರ್ಗಾ ಪೂಜೆ, ದೀಪಾವಳಿ ಹಬ್ಬಗಳೂ ಮುಂದೆ ಇರುವುದರಿಂದ ಬಳಕೆ ಪ್ರಮಾಣ ಹೆಚ್ಚಲಿದೆ. ಇದು ಸಹ ಈರುಳ್ಳಿಯನ್ನು ಇನ್ನಷ್ಟು ತುಟ್ಟಿಯಾಗಿ ಸಲಿದೆ ಎಂದು ಎಪಿಎಂಸಿ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.