ನವದೆಹಲಿ(ಪಿಟಿಐ): ಉಕ್ರೇನ್‌ನಲ್ಲಿ ತಲೆದೋರಿರುವ ಬಿಕ್ಕಟ್ಟು ದೇಶದ ಔಷಧ ಉದ್ಯಮ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾ ಸಂಘಗಳ ಒಕ್ಕೂಟ (ಫಿಕ್ಕಿ) ಹೇಳಿದೆ.
ಬಿಕ್ಕಟ್ಟಿನಿಂದಾಗಿ ಉಕ್ರೇನ್‌ಗೆ ಭಾರತ ದಿಂದ ಔಷಧ ರಫ್ತು ಕಡಿಮೆಯಾಗಲಿದೆ. ಈಗಾಗಲೇ ರಫ್ತಾಗಿರುವ ಔಷಧಗಳಿಗೆ ಬಾಕಿ ಪಾವತಿ ಆಗಬೇಕಿದೆ. ಆದರೆ, ಡಾಲರ್ ವಿರುದ್ಧ ಅಲ್ಲಿನ ಸ್ಥಳೀಯ ಕರೆನ್ಸಿ ‘ಹ್ರಿವ್ನಿಯಾ’ ಮೌಲ್ಯ ಶೇ 20 ರಷ್ಟು ಕುಸಿದಿದೆ. ಇದರಿಂದ ರಫ್ತುದಾರ ರಿಗೆ ಹೆಚ್ಚಿನ ನಷ್ಟವಾಗುವ ಸಾಧ್ಯತೆ ಇದೆ ಎಂದು ‘ಫಿಕ್ಕಿ’ ಕಳವಳ ವ್ಯಕ್ತಪಡಿಸಿದೆ.
ಸ್ವತಂತ್ರ ರಾಷ್ಟ್ರಗಳ ಒಕ್ಕೂಟದಲ್ಲಿ (ಸಿ ಐಎಸ್) ರಷ್ಯಾ ನಂತರ ಉಕ್ರೇನ್ ಭಾರತದ ಎರಡನೇ ಅತಿ ದೊಡ್ಡ ವಾಣಿಜ್ಯ ಪಾಲುದಾರ ದೇಶ. 2012–13ನೇ ಸಾಲಿನಲ್ಲಿ ಉಕ್ರೇನ್‌ಗೆ 5190 ಕೋಟಿ ಡಾಲರ್ (₨3.21 ಲಕ್ಷ ಕೋಟಿ) ಮೊತ್ತದ ಸರಕು ರಫ್ತಾಗಿದೆ. 265 ಕೋಟಿ ಡಾಲರ್ (₨16,430 ಕೋಟಿ) ಮೊತ್ತದ ಸರಕು ಆಮದು ಮಾಡಿಕೊಳ್ಳ ಲಾಗಿದೆ.
2012–13ನೇ ಸಾಲಿನಲ್ಲಿ ದೇಶ ದಿಂದ 15,400 ಕೋಟಿ ಡಾಲರ್ (₨9.54 ಲಕ್ಷ ಕೋಟಿ) ಮೌಲ್ಯದ ಔಷಧಗಳು ಉಕ್ರೇನ್‌ಗೆ ರಫ್ತಾಗಿವೆ. ಭಾರತದ ಔಷಧ ತಯಾರಿಕಾ ಕಂಪೆನಿಗಳ ಶೇ 56ರಷ್ಟು ಸರಕು ಮಾರಾಟವಾಗುವುದು ಈಗಿನ ಗಲಭೆ ಪೀಡಿತ ಕ್ರಿಮಿಯಾದಲ್ಲೇ. ಇತ್ತೀಚಿನ ಬಿಕ್ಕಟ್ಟಿನಿಂದ ಭಾರತೀಯ ಔಷಧ ಕಂಪೆನಿಗಳು ವಿಮಾನದಲ್ಲಿನ ಸಾಗಣೆ ವೆಚ್ಚ, ವಿಮೆ, ತೆರಿಗೆ ಎಲ್ಲವನ್ನೂ ಪಾವತಿಸಿ ಉಕ್ರೇನ್‌ಗೆ ರವಾನಿಸುವ ಸರಕುಗಳಿಗೆ ಬೆಲೆ ತಗ್ಗಿದೆ ಎಂದು ‘ಫಿಕ್ಕಿ’ ಹೇಳಿದೆ.
ಬಿಕ್ಕಟ್ಟು ಹೀಗೆಯೇ ಮುಂದುವರಿದರೆ, ರಫ್ತು ವಹಿವಾಟು ನಷ್ಟದ ಜತೆಗೇ ಉಕ್ರೇನ್ನಿಂದ ಆಮದು ಮಾಡಿಕೊ ಳ್ಳುವ ಸರಕುಗಳೂ ತುಟ್ಟಿಯಾಗುವ ಸಾಧ್ಯತೆ ಇದೆ ಎಂದು ‘ಫಿಕ್ಕಿ’ ಅಧ್ಯಯನ ಗಮನ ಸೆಳೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.