ADVERTISEMENT

ಎಥೆನಾಲ್ ಅಧಿಕ ಉತ್ಪಾದನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2012, 19:30 IST
Last Updated 27 ಜೂನ್ 2012, 19:30 IST

ನವದೆಹಲಿ(ಪಿಟಿಐ): ದೇಶದಲ್ಲಿನ `ಎಥೆನಾಲ್~ ಉತ್ಪಾದನೆ   2012ರಲ್ಲಿ ಶೇ 29ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.

ಸಕ್ಕರೆಯ ಉತ್ಪಾದನೆ ಹೆಚ್ಚಾಗಿರುವುದರಿಂದ ಪ್ರಸಕ್ತ ಮಾರುಕಟ್ಟೆ ವರ್ಷ(2011 ಅಕ್ಟೋಬರ್‌ನಿಂದ 2012ರ ಸೆಪ್ಟೆಂಬರ್) ಭಾರತದಲ್ಲಿ 217 ಕೋಟಿ ಲೀಟರ್ ಎಥೆನಾಲ್ ಉತ್ಪಾದನೆ ಆಗಲಿದೆ ಎಂದು  ಅಮೆರಿಕದ ಕೃಷಿ ಇಲಾಖೆ(ಯುಎಸ್‌ಡಿಎ) ಅಂದಾಜು ಮಾಡಿದೆ.

2010-11ರ ಮಾರುಕಟ್ಟೆ ವರ್ಷದಲ್ಲಿ ಭಾರತದಲ್ಲಿ 168.10 ಕೋಟಿ ಲೀಟರ್ ಎಥೆನಾಲ್ ಉತ್ಪಾದನೆ ಆಗಿದ್ದಿತು.

ಭಾರತದಲ್ಲಿ ಸಕ್ಕರೆಯ ಮೊಲಾಸಸ್‌ನಿಂದಲೇ ಸಾಂಪ್ರದಾಯಿಕ ಶೈಲಿಯಲ್ಲಿ ಎಥೆನಾಲ್ ಉತ್ಪಾದಿಸಲಾಗುತ್ತಿದೆ. 2011-12ರ ಮಾರುಕಟ್ಟೆ ವರ್ಷದಲ್ಲಿ ಭಾರತದಲ್ಲಿ ಒಟ್ಟು 2.60 ಕೋಟಿ ಟನ್ ಸಕ್ಕರೆ ಉತ್ಪಾದನೆ ಆಗುವ ಅಂದಾಜಿದೆ.
 
ವಾಸ್ತವವಾಗಿ ಭಾರತದ ಆಂತರಿಕ ಮಾರುಕಟ್ಟೆಯಲ್ಲಿನ ಸಕ್ಕರೆ ಬೇಡಿಕೆ 2.20 ಕೋಟಿ ಟನ್‌ಗಳಷ್ಟಿದ್ದು, ಈ ಬಾರಿ ಅಗತ್ಯಕ್ಕಿಂತಲೂ ಹೆಚ್ಚು ಸಕ್ಕರೆ ಉತ್ಪಾದನೆ ಆಗಲಿದೆ. ಇದೇ ವೇಳೆ ಎಥೆನಾಲ್ ಉತ್ಪಾದನೆಯೂ ಹೆಚ್ಚಲಿದೆ ಎಂದಿದೆ `ಯುಎಡಿಎ~ದ ಇತ್ತೀಚಿನ ವರದಿ.

ಆದರೆ, ಭಾರತದಲ್ಲಿನ ಎಥೆನಾಲ್ ಬೇಡಿಕೆ ಈ ವರ್ಷ 208.50 ಕೋಟಿ ಲೀಟರ್‌ನಷ್ಟಿರಲಿದೆ. ಜತೆಗೆ ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ 8 ಕೋಟಿ ಲೀಟರ್ ಎಥೆನಾಲ್ ಆಮದು  ಸಹ ಆಗಲಿದೆ. ಅಂದರೆ ಅಗತ್ಯಕ್ಕಿಂತ ತುಸು ಹೆಚ್ಚೇ ಎಥೆನಾಲ್ ಲಭ್ಯವಿರಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.