ADVERTISEMENT

ಎನರ್ಜೆಟಿಂಗ್ ಲೈಟಿಂಗ್: ವಹಿವಾಟು ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST

ಬೆಂಗಳೂರು: ಎಲ್‌ಇಡಿ ದೀಪಗಳ (ಸಿಎಫ್‌ಎಲ್) ತಯಾರಿಕೆಯ ದೇಶದ ಅತಿದೊಡ್ಡ ಸಂಸ್ಥೆಯಾಗಿರುವ ಎನರ್ಜೆಟಿಂಗ್ ಲೈಟಿಂಗ್ ಇಂಡಿಯಾ ಸಂಸ್ಥೆ, ತನ್ನ ಮಾರುಕಟ್ಟೆ ಪಾಲು ವಿಸ್ತರಿಸಲು ಉದ್ದೇಶಿಸಿದೆ.

ಈ ಉದ್ದೇಶಕ್ಕೆ ಚೀನಾದ ದೈತ್ಯ ಸಂಸ್ಥೆ ಯಾಂಕೊನ್ ಗ್ರೂಪ್ ಜತೆ ಒಪ್ಪಂದ ಮಾಡಿಕೊಂಡಿದೆ. ದೇಶಿ ಮಾರುಕಟ್ಟೆಗಾಗಿ ಎಲ್‌ಇಡಿ ದೀಪಗಳ ತಯಾರಿಕೆಗೆ ತಂತ್ರಜ್ಞಾನ ಮತ್ತಿತರ ನೆರವನ್ನು ಯಾಂಕೊನ್ ನೀಡಲಿದೆ ಎಂದು ಎನರ್ಜೆಟಿಂಗ್‌ನ ವ್ಯವಸ್ಥಾಪಕ ನಿರ್ದೇಶಕ ಕಿಷನ್ ಮೆಹ್ತಾ ತಿಳಿಸಿದ್ದಾರೆ.

ಎಲ್‌ಇಡಿ ದೀಪಗಳು ಗರಿಷ್ಠ ದಕ್ಷತೆ ಮತ್ತು ಪರಿಸರ ಸ್ನೇಹಿ ಎಂದು ಜಾಗತಿಕವಾಗಿ ಮನ್ನಣೆಗೆ ಪಾತ್ರವಾಗಿವೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.