ADVERTISEMENT

`ಎನ್‌ಎಸ್‌ಇ' ನೂತನ ಸಿಇಒ ಚಿತ್ರಾ ರಾಮಕೃಷ್ಣ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2012, 21:41 IST
Last Updated 26 ನವೆಂಬರ್ 2012, 21:41 IST

ಮುಂಬೈ(ಪಿಟಿಐ): ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಸಿಇ) ನೂತನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಚಿತ್ರಾ ರಾಮಕೃಷ್ಣ ನೇಮಕಗೊಂಡಿದ್ದಾರೆ.

2013ರ ಏಪ್ರಿಲ್ 1ರಿಂದ ಅಧಿಕಾರ ಸ್ವೀಕರಿಸಲಿರುವ ಚಿತ್ರಾ, 5ವರ್ಷ ಅಧಿಕಾರದಲ್ಲಿರುವರು. ಸದ್ಯ ಚಿತ್ರಾ `ಬೌರ್ಸ್' ವಿಭಾಗ ಜಂಟಿ ನಿರ್ದೇಶಕಿ. ಸದ್ಯ `ಎನ್‌ಎಸ್‌ಇ' ಮುಖ್ಯಸ್ಥರಾಗಿರುವ ರವಿ ನಾರಾಯಣ್ ಏ. 1ರಿಂದ ಕಾರ್ಯನಿರ್ವಾಹಕೇತರ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.