ADVERTISEMENT

ಎರಡು ರೀತಿಯ ಗೃಹ ಸಾಲ ಬಡ್ಡಿ ದರ: ಬ್ಯಾಂಕ್‌ಗಳ ಹಿಂದೇಟು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳನ್ನು ಹೊರತು ಪಡಿಸಿದರೆ ಉಳಿದ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಎರಡು ರೀತಿಯ ಗೃಹ ಸಾಲ ಬಡ್ಡಿ ದರ ಅನ್ವಯವಾಗುವ ಗೃಹ  ಸಾಲಗಳನ್ನು ನೀಡಲು ಆಸಕ್ತಿ ತೋರಿಸುತ್ತಿಲ್ಲ ಎಂದು ಎಡಿಲ್‌ವಿಸ್ ಹೌಸಿಂಗ್ ಫೈನಾನ್ಸ್ (ಇಎಚ್‌ಎಫ್‌ಎಲ್) ಹೇಳಿದೆ.

ಎರಡು ಬಗೆಯ ಬಡ್ಡಿ ದರ ಯೋಜನೆ ಅನ್ವಯ ಗೃಹ ಸಾಲ ಪಡೆದುಕೊಂಡ ಮೊದಲ ಎರಡೂವರೆ ವರ್ಷಗಳ ವರೆಗೆ ಬಡ್ಡಿ ದರ ವ್ಯತ್ಯಾಸವಾಗುವುದಿಲ್ಲ, ನಿಗದಿತವಾಗಿರುತ್ತದೆ. ನಂತರದ ಅವಧಿಯಲ್ಲಿ ಬ್ಯಾಂಕಿನ ಮೂಲ ದರ ಆಧರಿಸಿ ವ್ಯತ್ಯಾಸವಾಗುತ್ತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.