ADVERTISEMENT

`ಎಸ್‌ಎಂಇ' ನೋಂದಣಿ ಬಿಗಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2012, 19:42 IST
Last Updated 28 ನವೆಂಬರ್ 2012, 19:42 IST

ಮುಂಬೈ (ಪಿಟಿಐ): ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ(ಬಿಎಸ್‌ಇ)  ಷೇರು ವಹಿವಾಟಿಗೆ ಸಂಬಂಧಿಸಿದಂತೆ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ(ಎಸ್‌ಎಂಇ) ವಲಯದ  ಕಂಪೆನಿಗಳ ನೋಂದಣಿ ನಿಯಮವನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಇನ್ನಷ್ಟು ಬಿಗಿಗೊಳಿಸಿದೆ. 

ಇನ್ನು ಮುಂದೆ `ಎಸ್‌ಎಂಇ' ವಲಯದ ಕಂಪೆನಿಯೊಂದು ಷೇರು ವಹಿವಾಟಿಗೆ ನೋಂದಣಿ ಮಾಡಿಕೊಳ್ಳಬೇಕಿದ್ದರೆ, `ಬಿಎಸ್‌ಇ' ಅಧಿಕಾರಿಗಳು ಖುದ್ದಾಗಿ ಆ ಕಂಪೆನಿಗೆ ಭೇಟಿ ನೀಡಿ ಅದರ ಚಟುವಟಿಕೆ ಖಚಿತಪಡಿಸಿಕೊಳ್ಳಬೇಕು. ಜತೆಗೆ ಆ ಕಂಪೆನಿಯು ಸಚಿವಾಲಯ ನೀಡಿದ ಪ್ರಮಾಣಪತ್ರವನ್ನೂ `ಬಿಎಸ್‌ಇ'ಗೆ ಸಲ್ಲಿಸಬೇಕು. ಕನಿಷ್ಠ ಎರಡು ವರ್ಷ ಕಾಲ `ಎಸ್‌ಎಂಇ' ವಲಯದಲ್ಲಿ ವಹಿವಾಟು ನಡೆಸಿದ ನಂತರವೇ ಬೇರೆ ವಲಯಕ್ಕೆ ಬದಲಾಗಲು ಅವಕಾಶ ನೀಡಲಾಗುತ್ತದೆ ಎಂದು ಬಿಎಸ್‌ಇ ಪ್ರಕಟಣೆ ತಿಳಿಸಿದೆ.

`ಬಿಎಸ್‌ಇ' ಮಾರ್ಚ್‌ನಲ್ಲಿ ಪ್ರತ್ಯೇಕ  `ಎಸ್‌ಎಂಇ' ವಹಿವಾಟು ಆರಂಭಿಸಿದ್ದು, ಈವರೆಗೆ 11 ಕಂಪೆನಿಗಳು ನೋಂದಾಯಿಸಿಕೊಂಡಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.