ಬೆಂಗಳೂರು: ಗ್ರಾಹಕರಿಗೆ ಕಡಿಮೆ ದರದ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಸೌಲಭ್ಯ ಒಳಗೊಂಡಿರುವ ಸ್ಮಾರ್ಟ್ಫೋನ್ ಒದಗಿಸಲು ಭಾರ್ತಿ ಏರ್ಟೆಲ್, ಐ.ಟಿ ಪರಿಕರ ತಯಾರಕ ಸಂಸ್ಥೆ ಇಂಟೆಕ್ಸ್ ಟೆಕ್ನಾಲಜೀಸ್ ಜತೆ ಒಪ್ಪಂದ ಮಾಡಿಕೊಂಡಿದೆ.
ಆರಂಭದಲ್ಲಿ ₹ 3,149 ಪಾವತಿಸಿ ‘4ಜಿ’ ಸ್ಮಾರ್ಟ್ಫೋನ್ ಖರೀದಿಸಬಹುದು. ಪ್ರತಿ ತಿಂಗಳೂ ₹ 169 ರೀಚಾರ್ಜ್ ಮಾಡಿದರೆ ಗ್ರಾಹಕರು 18 ತಿಂಗಳ ನಂತರ ₹ 500 ಮತ್ತು 36 ತಿಂಗಳ ನಂತರ ₹ 1,000 ನಗದು ಮರಳಿ ಪಡೆಯಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.