ADVERTISEMENT

ಏ. 4, 6ರಂದು ಬ್ಯಾಂಕ್‌ಗಳಿಗೆ ರಜೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಮಹಾವೀರ ಜಯಂತಿ ಮತ್ತು ಗುಡ್ ಫ್ರೈಡೆ ಕಾರಣಕ್ಕೆ ಇದೇ 4 ಮತ್ತು  6 ಸರ್ಕಾರಿ ರಜೆ ದಿನಗಳು ಆಗಿರುವುದರಿಂದ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ವಾಣಿಜ್ಯ ಬ್ಯಾಂಕ್‌ಗಳಲ್ಲಿ ವಹಿವಾಟು ನಡೆಯಲಾರದು.

 ಈ ಎರಡು ದಿನ ಬ್ಯಾಂಕ್‌ಗಳು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಜನಸಾಮಾನ್ಯರು ಮತ್ತು ಉದ್ದಿಮೆ ವಹಿವಾಟುದಾರರಿಗೆ ಕೆಲಮಟ್ಟಿಗೆ ಅನಾನುಕೂಲ ಎದುರಾಗಲಿದೆ. ಈ ರಜಾ ದಿನಗಳಲ್ಲಿ ಎಟಿಎಂಗಳಿಂದ ಹಣ ಪಡೆಯಲು ಗ್ರಾಹಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಬ್ಯಾಂಕ್‌ಗಳು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ ಎಂದು ಬ್ಯಾಂಕಿಂಗ್ ಮೂಲಗಳು ತಿಳಿಸಿವೆ.  

   ಉದ್ದಿಮೆ ಸಂಸ್ಥೆಗಳು, ಷೇರುಪೇಟೆ, ವಿದೇಶ ವಿನಿಮಯ ಮತ್ತು ಹಣದ ಮಾರುಕಟ್ಟೆಗಳು  ಈ ರಜಾ ದಿನಗಳಂದು ಕಾರ್ಯನಿರ್ವಹಿಸದ ಕಾರಣಕ್ಕೆ ಉದ್ದಿಮೆ - ವಹಿವಾಟಿಗೆ ಹೆಚ್ಚು ಧಕ್ಕೆಯಾಗದು ಎಂದೂ ನಿರೀಕ್ಷಿಸಲಾಗಿದೆ.

ಸೋಮವಾರವಷ್ಟೇ ವಾರ್ಷಿಕ ಲೆಕ್ಕಪತ್ರ ತಪಾಸಣೆ ಕಾರಣಕ್ಕೆ ಬ್ಯಾಂಕ್‌ಗಳು ಸಾರ್ವಜನಿಕರ ವಹಿವಾಟು ನಡೆಸಿಲ್ಲ. ಏ.7ರಂದು ವಹಿವಾಟು ನಡೆಯಲಿದೆ. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.