ADVERTISEMENT

`ಒಣಗಿದ ತೆಂಗಿಗೆ ಪರಿಹಾರ'

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 19:59 IST
Last Updated 19 ಜೂನ್ 2013, 19:59 IST

ತಿಪಟೂರು: ರೋಗ, ಕೀಟಬಾಧೆ, ಸತತ ಬರದಿಂದಾಗಿ ಸಂಪೂರ್ಣ ನಾಶವಾಗಿರುವ ತೆಂಗಿನ ಮರಗಳ ತಲಾವಾರು ಲೆಕ್ಕದಲ್ಲಿ ರೈತರಿಗೆ ಪರಿಹಾರ ಒದಗಿಸಲು ಸರ್ಕಾರ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ನಗರದ ಎಪಿಎಂಸಿ ಆವರಣದಲ್ಲಿ ಬುಧವಾರ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸುವ ನಫೆಡ್ ಕೇಂದ್ರಕ್ಕೆ ಚಾಲನೆ ನೀಡಿದ ಅವರು, ತೆಂಗಿನ ತೋಟಗಳು ಹಿಂದೆಂದೂ ಕಾಣದಷ್ಟು ಬರಡಾಗಿವೆ. ಈ ಬಗ್ಗೆ ಪೂರ್ಣ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕ್ರಮಬದ್ಧ ಸಮೀಕ್ಷೆ ಮೂಲಕ ವಾಸ್ತವ ನಷ್ಟ ಅರಿಯಲಾಗುವುದು.

ಸಂಪೂರ್ಣ ಒಣಗಿರುವ ಮರಗಳ ಲೆಕ್ಕದಲ್ಲಿ ಪರಿಹಾರ ನೀಡಲಾಗುವುದು. ಇದಕ್ಕಾಗಿ ಕೇಂದ್ರದ ನೆರವು ಪಡೆದು ಒಟ್ಟು 100 ಕೋಟಿ ರೂಪಾಯಿ ಮೀಸಲಿಡಲು ಚಿಂತಿಸಲಾಗಿದೆ. ವಾಸ್ತವ ಸ್ಥಿತಿಯ ಅವಲೋಕನದ ನಂತರ ಪ್ರತಿ ತೆಂಗಿನ ಮರಕ್ಕೆ ಪರಿಹಾರದ ಮೊತ್ತವನ್ನು ನಿಗದಿಪಡಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.