ADVERTISEMENT

ಕಬ್ಬು: ಕನಿಷ್ಠ ಖಾತರಿ ಬೆಲೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST

ನವದೆಹಲಿ (ಪಿಟಿಐ): ಕಬ್ಬು ಬೆಳೆಗಾರರಿಗೆ ನೀಡುವ ನ್ಯಾಯಯುತ ಮತ್ತು ಪ್ರತಿಫಲ ಬೆಲೆಯನ್ನು  (ಎಫ್‌ಆರ್‌ಪಿ) ಪ್ರತಿ ಕ್ವಿಂಟಲ್‌ಗೆ ್ಙ145ರಂತೆ, ಶೇ 4.2ರಷ್ಟು ಸರ್ಕಾರ ಹೆಚ್ಚಿಸಿದೆ.

2011-12ನೇ ಸಾಲಿನ ಅಕ್ಟೋಬರ್ ತಿಂಗಳಿಂದ ಈ ಪರಿಷ್ಕೃತ ದರಗಳು ಜಾರಿಗೆ ಬರಲಿವೆ. ಕಬ್ಬು ಬೆಳೆಗೆ 2010-11ರಲ್ಲಿ ಕ್ವಿಂಟಲ್‌ಗೆ   ್ಙ 139 ‘ಎಫ್‌ಆರ್‌ಪಿ’ ಘೋಷಿಸಲಾಗಿತ್ತು.ಕಾನೂನು ಪ್ರಕಾರ ಕಬ್ಬು ಬೆಳೆಗೆ ಸರ್ಕಾರ ನಿಗದಿಪಡಿಸುವ ಕನಿಷ್ಠ ಖಾತರಿ ಬೆಲೆಯೇ ‘ಎಫ್‌ಆರ್‌ಪಿ’. 2009-10ನೇ ಸಾಲಿನಿಂದ ಸರ್ಕಾರ ಇದನ್ನು ಜಾರಿಗೆ ತಂದಿದೆ. ಕಬ್ಬು ಉತ್ಪಾದನಾ ವೆಚ್ಚ, ಸಕ್ಕರೆ ಕಾರ್ಖಾನೆಗಳಿಗೆ ಸಾಗಾಣಿಕೆ ವೆಚ್ಚ ಇತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕನಿಷ್ಠ ಖಾತರಿ ದರ ನಿಗದಿಪಡಿಸಲಾಗುತ್ತದೆ.   

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಕಳೆದ ವಾರ  ಕಬ್ಬಿಗೆ ಕನಿಷ್ಠ ಖಾತರಿ ಬೆಲೆಯನ್ನು ಅಂತಿಮಗೊಳಿಸಿದೆ ಎಂದು ಆಹಾರ ಸಚಿವಾಲಯ ಕಬ್ಬು ಬೆಳೆಯುವ ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ಸರ್ಕಾರ ನಿಗದಿಪಡಿಸುವ ‘ಎಫ್‌ಆರ್‌ಪಿ’ ದರಕ್ಕಿಂತ ಹೆಚ್ಚಿನ ದರದಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಂದ ಕಬ್ಬನ್ನು ಖರೀದಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.