ADVERTISEMENT

ಕರಕುಶಲ ವಸ್ತು ರಫ್ತು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

ನವದೆಹಲಿ(ಪಿಟಿಐ): ಆಗಸ್ಟ್‌ನಲ್ಲಿ ಕರಕುಶಲ ಸರಕು ರಫ್ತು ಶೇ 10ರಷ್ಟು ಹೆಚ್ಚಿದ್ದು, 49.70 ಕೋಟಿ ಡಾಲರ್ (ರೂ2.6 ಲಕ್ಷ ಕೋಟಿ) ವಹಿವಾಟು ನಡೆದಿದೆ ಎಂದು ಕರಕುಶಲ ಸರಕು ರಫ್ತು ಉತ್ತೇಜನ ಮಂಡಳಿ (ಇಪಿಸಿಎಚ್) ಹೇಳಿದೆ.

ದೇಶದಿಂದ ಶೇ 60ರಷ್ಟು ಕರಕು ಶಲ ವಸ್ತುಗಳು ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಗೆ ರಫ್ತಾ ಗುತ್ತವೆ. ಈ ಬಾರಿ ಚೀನಾ, ಆಫ್ರಿಕಾ ದಿಂದಲೂ ಹೆಚ್ಚಿನ  ಬೇಡಿಕೆ ಬಂದಿದೆ ಎಂದು `ಇಪಿಸಿಎಚ್~ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.