ನವದೆಹಲಿ(ಪಿಟಿಐ): ಹಬ್ಬಗಳು ಮುಗಿದು ಬೇಡಿಕೆ ಕ್ಷೀಣಿಸಿದ ಹಿನ್ನೆಲೆಯಲ್ಲಿ ಕಾರು ಮಾರಾಟ ನವೆಂಬರ್ನಲ್ಲಿ ಶೇ 8.15ರಷ್ಟು ಕುಸಿತ ಕಂಡಿದೆ. ಒಟ್ಟು 1,42,849 ಕಾರುಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1,55,535 ಕಾರುಗಳು ಮಾರಾಟವಾಗಿದ್ದವು ಎಂದು ಭಾರತೀಯ ವಾಹನ ತಯಾರಿಕಾ ಸಂಸ್ಥೆ ಗಳ ಒಕ್ಕೂಟ (ಎಸ್ಐಎಎಂ) ಮಂಗಳ ವಾರ ಅಂಕಿ ಅಂಶ ಪ್ರಕಟಿಸಿದೆ.
‘ಸದ್ಯದ ಮಾರುಕಟ್ಟೆ ಪರಿಸ್ಥಿತಿ ಸವಾಲಿನದಾಗಿದೆ. ಇನ್ನೇನಿದ್ದರೂ ಲೋಕಸಭೆ ಚುನಾವಣೆ ನಡೆದು ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾರುಕಟ್ಟೆ ಚೇತರಿಸಿಕೊಳ್ಳಬಹುದು. ಹಣಕಾಸು ಮಾರುಕಟ್ಟೆ ಅಸ್ಥಿರತೆ ಮತ್ತು ಬಡ್ಡಿ ದರ ಏರಿಕೆಯಿಂದ ಹಬ್ಬಗಳ ಸಂದರ್ಭದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟ ನಡೆ ದಿಲ್ಲ’ ಎಂದು ‘ಎಸ್ಐಎಎಂ’ನ ಸಹಾ ಯಕ ಪ್ರಧಾನ ನಿರ್ದೇಶಕ ಸುಗತೊ ಸೆನ್್ ಸುದ್ದಿಗಾರರಿಗೆ ತಿಳಿಸಿದರು.
ಮಾರುತಿ ಸುಜುಕಿ ಇಂಡಿಯಾ ನವೆಂಬರ್ನಲ್ಲಿ ಕಾರು ಮಾರಾಟದಲ್ಲಿ ಶೇ 4.22ರಷ್ಟು ಕುಸಿತ ಕಂಡಿದೆ. ಒಟ್ಟು 71,649 ಕಾರುಗಳನ್ನು ಮಾರಾಟ ಮಾಡಿದೆ. ಹುಂಡೈ ಮೋಟಾರ್ ಶೇ 3.66ರಷ್ಟು ಇಳಿಕೆ ದಾಖಲಿಸಿದೆ. ಒಟ್ಟು 33,427 ಕಾರು ಮಾರಾಟವಾಗಿವೆ. ಟಾಟಾ ಕಾರುಗಳ ಮಾರಾಟ ಶೇ 41.57ರಷ್ಟು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕೇವಲ 7,910 ಕಾರುಗಳು ಮಾರಾಟವಾಗಿವೆ. ‘ಸೆಡಾನ್ ಅಮೇಜ್’ ಮಾದರಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿರುವುದರಿಂದ ಹೋಂಡಾ ಕಾರ್ಸ್ ಇಂಡಿಯಾ ಶೇ 150.87ರಷ್ಟು ಪ್ರಗತಿ ದಾಖಲಿಸಿದೆ. ಮಹೀಂದ್ರಾ ಅಂಡ್ ಮಹೀಂದ್ರಾ ಶೇ 30.46ರಷ್ಟು ಕುಸಿತ ಕಂಡಿದೆ.
ದ್ವಿಚಕ್ರ ವಾಹನ
ನವೆಂಬರ್ನಲ್ಲಿ ಒಟ್ಟು 8,80,015 ದ್ವಿಚಕ್ರವಾಹನಗಳು ಮಾರಾಟವಾಗಿದ್ದು ಶೇ 1.44ರಷ್ಟು ಪ್ರಗತಿ ಕಂಡಿದೆ. ಹೀರೋ ಮೋಟೊ ಕಾರ್ಪ್ ಶೇ 5, ಹೋಂಡಾ ಶೇ 44.1ರಷ್ಟು ಏರಿಕೆ ದಾಖಲಿಸಿವೆ. ಬಜಾಜ್ ಆಟೊ ಶೇ 28.42ರಷ್ಟು ಕುಸಿತ ಕಂಡಿದೆ.
ಗಣಿಗಾರಿಕೆ ಮತ್ತು ಮೂಲಸೌಕರ್ಯ ವಲಯಗಳ ಪ್ರಗತಿ ಸ್ಥಗಿತಗೊಂಡಿರುವು ದರಿಂದ ವಾಣಿಜ್ಯ ಬಳಕೆಯ ವಾಹನಗ ಳಿಗೆ ಬೇಡಿಕೆ ತಗ್ಗಿದೆ ಎಂದು ‘ಎಸ್ಐಎ ಎಂ’ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.