ADVERTISEMENT

ಕೆಲಸದ ಒತ್ತಡ: ಮಹಿಳೆಯರ ಅತೃಪ್ತಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 20:30 IST
Last Updated 7 ಮಾರ್ಚ್ 2012, 20:30 IST

ನವದೆಹಲಿ (ಪಿಟಿಐ): ಕೆಲಸದ ಒತ್ತಡ ಮತ್ತು ಕಡಿಮೆ ವೇತನದ ಕಾರಣಕ್ಕೆ ಶೇ 60ಕ್ಕೂ ಹೆಚ್ಚು ಮಹಿಳೆಯರು ತಮ್ಮ ವೃತ್ತಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ನಡೆಸಿದ ಸಮೀಕ್ಷೆ ತಿಳಿಸಿದೆ.

ವೃತ್ತಿಪರ ಮಹಿಳೆಯರ ಕುರಿತು `ಅಸೋಚಾಂ~ ಈ ಸಮೀಕ್ಷೆ ನಡೆಸಿದೆ. ತಾವು ಮಾಡುತ್ತಿರುವ ಕೆಲಸಕ್ಕೆ ಸೂಕ್ತವೇತನ ಲಭಿಸುತ್ತಿಲ್ಲ ಎಂದು ಶೇ 40ರಷ್ಟು ಜನರು ಮಹಿಳೆಯರು ದೂರಿದರೆ, ಶೇ 35ರಷ್ಟು ಮಹಿಳೆಯರು ಕೆಲಸದ ಒತ್ತಡ ಹೆಚ್ಚು ಎಂದು ಹೇಳಿದ್ದಾರೆ.
 
ಐ.ಟಿ, ಎಂಜಿನಿಯರಿಂಗ್, ಸಂಶೋಧನೆ, ಹಣಕಾಸು, ಆತಿಥ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿರುವ 30ರಿಂದ 50 ವರ್ಷ ನಡುವಿನ 2,600 ಮಹಿಳೆಯರನ್ನು `ಅಸೋಚಾಂ~ ತಂಡ ಸಂದರ್ಶಿಸಿ, ಈ ಸಮೀಕ್ಷೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.