ADVERTISEMENT

ಕೈಗಾರಿಕಾ ಉತ್ಪಾದನೆ ಕುಂಠಿತ

ಮಂದಗತಿಯ ಗಣಿಗಾರಿಕೆ ಚಟುವಟಿಕೆಯ ಪರಿಣಾಮ

ಪಿಟಿಐ
Published 16 ಮೇ 2018, 19:30 IST
Last Updated 16 ಮೇ 2018, 19:30 IST

ನವದೆಹಲಿ : ಮಾರ್ಚ್‌ ತಿಂಗಳ ಕೈಗಾರಿಕಾ ಉತ್ಪಾದನೆಯು ಶೇ 4.4ರಷ್ಟು ದಾಖಲಾಗಿದೆ.

ಇದು ಐದು ತಿಂಗಳಲ್ಲಿನ ಅತಿ ಕಡಿಮೆ ಮಟ್ಟದ್ದಾಗಿದೆ. ಭಾರಿ ಯಂತ್ರೋಪಕರಣಗಳ ಉತ್ಪಾದನೆ ಕುಸಿತ ಮತ್ತು ಮಂದಗತಿಯ ಗಣಿಗಾರಿಕೆ ಚಟುವಟಿಕೆಗಳ ಕಾರಣಕ್ಕೆ ಉತ್ಪಾದನೆ ಕುಂಠಿತಗೊಂಡಿದೆ. 2017ರ ಮಾರ್ಚ್‌ನಲ್ಲಿಯೂ ಇದೇ ಮಟ್ಟದ ಉತ್ಪಾದನೆ ದಾಖಲಾಗಿತ್ತು.

ಕೈಗಾರಿಕಾ ಉತ್ಪಾದನಾ ಸೂಚ್ಯಂಕದಿಂದ (ಐಐಪಿ) ಅಳೆಯಲಾಗುವ ಕೈಗಾರಿಕಾ ಉತ್ಪಾದನೆಯು 2017–18ನೇ ಹಣಕಾಸು ವರ್ಷದಲ್ಲಿಯೂ ಶೇ 4.3ರಷ್ಟಕ್ಕೆ ಇಳಿಕೆಯಾಗಿದೆ. 2016–17ರಲ್ಲಿ ಇದು ಶೇ 4.6ರಷ್ಟಿತ್ತು ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ ತಿಳಿಸಿದೆ.

ADVERTISEMENT

2017ರ ಅಕ್ಟೋಬರ್‌ನಲ್ಲಿ ದಾಖಲಾಗಿದ್ದ ಶೇ 1.8ರಷ್ಟು ಉತ್ಪಾದನೆಯು ಈ ಹಿಂದಿನ ಕನಿಷ್ಠ ಮಟ್ಟವಾಗಿತ್ತು.

ಈ ವರ್ಷದ ಮಾರ್ಚ್‌ನಲ್ಲಿ ಗಣಿಗಾರಿಕೆ ಉತ್ಪಾದನೆಯು ಶೇ 2.8ರಷ್ಟಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 10ರಷ್ಟು ದಾಖಲಾಗಿತ್ತು.

ವಿದ್ಯುತ್‌ ಉತ್ಪಾದನೆಯೂ ಶೇ 6.2 ರಿಂದ ಶೇ 5.9ಕ್ಕೆ ಇಳಿದಿದೆ. ಭಾರಿ ಯಂತ್ರೋಪಕರಣಗಳ ತಯಾರಿಕೆಯು ಹಿಂದಿನ ವರ್ಷದ ಶೇ 9.4ದಿಂದ ಶೇ 1.8ಕ್ಕೆ ಕುಸಿದಿದೆ. ಗ್ರಾಹಕ ಉತ್ಪನ್ನಗಳ ತಯಾರಿಕೆಯು ಶೇ 0.6ದಿಂದ ಶೇ 2.9ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.