ADVERTISEMENT

ಕೈಗಾರಿಕೆ ಕ್ಷೇತ್ರದಲ್ಲಿ ಆಶಾಕಿರಣ

ವಿದ್ಯುತ್, ಗಣಿ ಸಾಧನೆ; ಜನವರಿ ‘ಐಐಪಿ’ ಪ್ರಗತಿ ಶೇ 0.1

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST

ನವದೆಹಲಿ(ಪಿಟಿಐ): ನವೆಂಬರ್‌ನಿಂದ ಆರಂಭಿಸಿ ಸತತ ಮೂರು ತಿಂಗಳುಗಳ ಕಾಲ ಇಳಿಜಾರಿನಲ್ಲಿಯೇ  ಸಾಗಿದ್ದ ದೇಶದ ಕೈಗಾರಿಕಾ ಕ್ಷೇತ್ರ, ಜನವರಿಯಲ್ಲಿ ಶೇ 0.1ರಷ್ಟು ಬೆಳವಣಿಗೆಯನ್ನು ತೋರುವ ಮೂಲಕ ಅಭಿವೃದ್ಧಿಯತ್ತ ಮುಖ ಮಾಡಿದೆ.

ತಯಾರಿಕೆ ವಲಯದಿಂದ ಕಳಪೆ ಸಾಧನೆ ಕಂಡುಬಂದಿದ್ದರೂ, ಕೈಗಾರಿಕಾ ಉತ್ಪಾದನೆ ಸೂಚ್ಯಂಕ(ಐಐಪಿ) ಜನವರಿಯಲ್ಲಿ ಮೇಲ್ಮುಖವಾಗಿ ಸಾಗಲು ವಿದ್ಯುತ್‌ ಮತ್ತು ಗಣಿಗಾರಿಕೆ ಕ್ಷೇತ್ರದ ಉತ್ತಮ ಕೊಡುಗೆಯೇ ಕಾರಣವಾಗಿದೆ. 2013ರ ಜನವರಿಯಲ್ಲಿ ‘ಐಐಪಿ’ ಪ್ರಗತಿ ಶೇ 2.5ರಷ್ಟಿತ್ತು.

ಈ ಮಧ್ಯೆ, ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿನ (ಏಪ್ರಿಲ್‌; ಜನವರಿ ಅವಧಿ) ಕೈಗಾರಿಕಾ ಕ್ಷೇತ್ರದ ಪ್ರಗತಿಯನ್ನು 2012; 13ನೇ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಯಾವುದೇ ಬದಲಾವಣೆ ಗೋಚರಿಸುವುದಿಲ್ಲ. ಹಿಂದಿನ ವರ್ಷದ ಮೊದಲ 10 ತಿಂಗಳಲ್ಲಿನ ‘ಐಐಪಿ’ ಶೇ 1ರಷ್ಟು ವೃದ್ಧಿ ಕಂಡುಬಂದಿತ್ತು.

‘ಈ ಬಾರಿ ಕೈಗಾರಿಕಾ ಕ್ಷೇತ್ರದ ಪ್ರಗತಿ ಉತ್ತಮ ನಿರೀಕ್ಷೆಯನ್ನು ಮೂಡಿಸಿದೆ. ತಯಾರಿಕಾ ಕ್ಷೇತ್ರ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿಯಾ ದರೂ ಉತ್ತಮ ಸಾಧನೆ ತೋರಬೇಕಿದೆ’ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಸಿ.ರಂಗರಾಜನ್‌ ಪ್ರತಿಕ್ರಿಯಿಸಿ ದ್ದಾರೆ.
ಇದಕ್ಕೂ ಮುನ್ನ ಅಕ್ಟೋಬರ್‌ನಲ್ಲಿ ‘ಐಐಪಿ’ ಶೇ 1.6ರಷ್ಟು ಕುಸಿತ ಕಂಡಿತ್ತು. ನವೆಂಬರ್‌, ಡಿಸೆಂಬರ್‌ನಲ್ಲೂ ನಕಾರಾ ತ್ಮಕ ಸಾಧನೆಯೇ ಮುಂದುವರಿದಿತ್ತು.

2014ರ ಜನವರಿಯಲ್ಲಿ ಮತ್ತು ಮೊದಲ 9 ತಿಂಗಳಲ್ಲಿ ಕ್ರಮವಾಗಿ ವಿದ್ಯುತ್‌ ಉತ್ಪಾದನೆ ವಲಯ ಶೇ 6.5 ಮತ್ತು ಶೇ 5.7ರಷ್ಟು,  ಗಣಿಗಾರಿಕೆ ಕ್ಷೇತ್ರ ಶೇ 14 ಮತ್ತು ಶೇ 1.5ರಷ್ಟು ಸಾಧನೆ ತೋರಿವೆ. ತಯಾರಿಕೆ ವಿಭಾಗದಲ್ಲಿ ಮಾತ್ರ ಜನವರಿಯಲ್ಲಿ ಶೇ 0.7ರಷ್ಟು ಕುಸಿತ ಕಂಡುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.