ADVERTISEMENT

ಕ್ರೆಡಲ್‌ಗೆ ನೇಮಕ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2012, 19:30 IST
Last Updated 24 ಮಾರ್ಚ್ 2012, 19:30 IST
ಕ್ರೆಡಲ್‌ಗೆ ನೇಮಕ
ಕ್ರೆಡಲ್‌ಗೆ ನೇಮಕ   

ಹುಬ್ಬಳ್ಳಿ:ಇಲ್ಲಿಯ ಕರ್ನಾಟಕ  ವಾಣಿಜ್ಯೋ ದ್ಯಮ ಸಂಸ್ಥೆಯ ವಿದ್ಯುತ್ ಉಪಸಮಿತಿಯ  ಅಧ್ಯಕ್ಷ ಎ.ಎಸ್. ಕುಲಕರ್ಣಿ ಅವರನ್ನು `ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ~ಯ (ಕ್ರೆಡಲ್) ತಜ್ಞ ಸದಸ್ಯರನ್ನಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನಕುಮಾರ್ ನೇಮಕ ಮಾಡಿದ್ದಾರೆ.

ಕುಲಕರ್ಣಿ ಅವರು 2012-14ರವರೆಗೆ ಸಂಸ್ಥೆಯ ಸದಸ್ಯರಾಗಿರುತ್ತಾರೆ.  ಅವರು ಎಂಎಂಟಿಸಿಯ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದ್ದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಸಲಹಾ ಸಮಿತಿ, ಹೆಸ್ಕಾಂನ ಗ್ರಾಹಕರ ರಕ್ಷಣಾ ವೇದಿಕೆ ಹಾಗೂ ನೈರುತ್ಯ ರೈಲ್ವೆ ವಲಯದ ಸಲಹಾ ಸಮಿತಿ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.