ADVERTISEMENT

ಗೆಬೆರಿಟ್‌ ಕಂಪೆನಿ ವಹಿವಾಟು ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2017, 19:30 IST
Last Updated 9 ಜುಲೈ 2017, 19:30 IST
ಅಬೂಬಕರ್‌
ಅಬೂಬಕರ್‌   

ಬೆಂಗಳೂರು: ಯೂರೋಪ್‌ನ ಸ್ನಾನಗೃಹ ಸೆರಾಮಿಕ್ಸ್‌   ವಲಯದ ಮುಂಚೂಣಿ ಕಂಪೆನಿ ಗೆಬೆರಿಟ್‌, ಭಾರತದ ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ವಿಶಿಷ್ಟ ಬಗೆಯ ಶೌಚಾಲಯ ಅಳವಡಿಸಿದೆ.

‘ಸ್ನಾನಗೃಹ, ಶೌಚಾಲಯಗಳಲ್ಲಿ ಜಾಗ ಉಳಿತಾಯಕ್ಕಾಗಿ ಗೋಡೆಗಳಲ್ಲಿಯೇ ನೀರಿನ ತೊಟ್ಟಿಗಳಿರುವ ಫ್ಲಷಿಂಗ್ ಸಿಸ್ಟಮ್‌ ಅಳವಡಿಸುತ್ತಿರುವುದು ಹೊಸ ಪರಿಕಲ್ಪನೆಯಾಗಿದೆ’ ಎಂದು  ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅಬೂಬಕರ್‌ ಕೋಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಈ ವಲಯದಲ್ಲಿ ಭಾರತದ ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುತ್ತಿದ್ದು ಗೆಬೆರಿಟ್ ಮುಂಚೂಣಿಯಲ್ಲಿದೆ.

ADVERTISEMENT

2010ರಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿದ ಗೆಬರಿಟ್‌ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದ್ದು, ಪುಣೆಯಲ್ಲಿ  ತಯಾರಿಕಾ ಘಟಕ ಹೊಂದಿದೆ ಎಂದರು.

‘ಭಾರತದ ಸ್ಯಾನಿಟರಿವೇರ್‌ ಉದ್ಯಮದಗಾತ್ರ ₹15,000 ಕೋಟಿಗಳಾಗಿದ್ದು,  ದುಬಾರಿ ಉತ್ಪನ್ನ ವಲಯದಲ್ಲಿ   ಗೆಬೆರಿಟ್‌ ಅರ್ಧ ಪಾಲು ಹೊಂದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.