ಮುಂಬೈ: ಟೈಟಾನ್ ಇಂಡಸ್ಟ್ರೀಸ್ನ ಚಿನ್ನಾಭರಣ ಬ್ರಾಂಡ್ ಆಗಿರುವ ಗೋಲ್ಡ್ಪ್ಲಸ್, ಚಿನ್ನಾಭರಣ ಬಳಸಿ ರೂಪಿಸಿರುವ ವಿಶ್ವದ ಮೊದಲ ಕಾರನ್ನು ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಅವರು ಸೋಮವಾರ ಇಲ್ಲಿ ಅನಾವರಣಗೊಳಿಸಿದರು.
ಚಿನ್ನಾಭರಣಗಳಿಂದ ಅಲಂಕೃತಗೊಂಡಿರುವ ಈ ನ್ಯಾನೊ ಕಾರಿನ ಪರಿಕಲ್ಪನೆ ಸಾಕಾರಗೊಳ್ಳಲು 30ಕ್ಕೂ ಹೆಚ್ಚು ಕಲಾವಿದರು ಶ್ರಮಿಸಿದ್ದಾರೆ. 22 ಕ್ಯಾರೆಟ್ನ 80ಕೆ.ಜಿ ಚಿನ್ನ ಹಾಗೂ 15 ಕೆ.ಜಿಯಷ್ಟು ಬೆಳ್ಳಿ ಮತ್ತು ಹರಳು ಗಳಿಂದ ಈ ಕಾರು ಅಲಂಕೃತಗೊಂಡಿದೆ. ಮೀನಕರಿ, ಕುಂದನ್ ಮೊದಲಾದ ಸಾಂಪ್ರದಾಯಿಕ ಶೈಲಿಗಳು ಇಲ್ಲಿ ಬಳಕೆಯಾಗಿವೆ.
ದೇಶದಲ್ಲಿ ಚಿನ್ನಾಭರಣಗಳ ತಯಾರಿಕೆಯ 5000 ವರ್ಷಗಳ ಸಂಭ್ರಮಾಚರಣೆ ಅಂಗವಾಗಿ ಈ ವಿಶಿಷ್ಟ ಪರಿಕಲ್ಪನೆಯ ಕಾರು ಸಿದ್ಧಪಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.ಬೆಳಗಾವಿ, ಶಿವಮೊಗ್ಗ ಸೇರಿದಂತೆ ದೇಶದಾದ್ಯಂತ 29 ನಗರಗಳಲ್ಲಿ ಈ ಕಾರನ್ನು ಪ್ರದರ್ಶಿಸಲಾಗುವುದು. ಆನಂತರವಷ್ಟೇ ಇದನ್ನು ಮಾರಾಟ ಮಾಡಬೇಕೆ ಅಥವಾ ಬೇಡವೇ ಎನ್ನುವುದನ್ನು ನಿರ್ಧರಿಸಲಾಗುವುದು. ಸದ್ಯಕ್ಕಂತೂ ಇದರ ಬೆಲೆ ಎಷ್ಟೆಂಬುದನ್ನು ಪ್ರಕಟಿಸಿಲ್ಲ. ಮಾರಾಟ ಮಾಡುವುದೇ ಆದರೆ, ಹರಾಜು ಹಾಕಬೇಕಾಗುತ್ತದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.