ಮುಂಬೈ (ಪಿಟಿಐ): ಇದೇ 24ರ ಅಕ್ಷಯ ತೃತೀಯ ದಂದು ಗೋಲ್ಡ್ ಇಟಿಎಫ್ ವಹಿವಾಟು ರಾತ್ರಿ 8 ಗಂಟೆಯವರೆಗೆ ವಿಸ್ತರಿಸಲಾಗಿದ್ದು, ಅಂದು ವಹಿವಾಟು ಶುಲ್ಕ ಇರುವುದಿಲ್ಲ ಎಂದು ರಾಷ್ಟ್ರೀಯ ಷೇರು ವಿನಿಮಯ (ಎನ್‌ಎಸ್‌ಇ) ಕೇಂದ್ರ ಹೇಳಿದೆ.
ಇತರೆ ದಿನ ಗೋಲ್ಡ್ ಇಟಿಎಫ್ ವಹಿವಾಟು ಬೆಳಿಗ್ಗೆ 9.15ರಿಂದ ಮಧ್ಯಾಹ್ನ 3.30ರವರೆಗೆ ಇರುತ್ತದೆ. ಅಕ್ಷಯ ತೃತಿಯದಂದು ಸಂಜೆ 4.30ರಿಂದ ಪುನಃ ವಹಿವಾಟು ಆರಂಭಗೊಂಡು ರಾತ್ರಿ 8ಗಂಟೆವರೆಗೂ ನಡೆಯಲಿದೆ ಎಂದು `ಎನ್‌ಎಸ್‌ಇ~ ಪ್ರಕಟಣೆ ಶುಕ್ರವಾರ ತಿಳಿಸಿದೆ.
2011ರ ಅಕ್ಷಯ ತೃತೀಯದಂದು ರೂ846 ಕೋಟಿಯಷ್ಟು ಗೋಲ್ಡ್ ಇಟಿಎಫ್ ವಹಿವಾಟು ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.