ನವದೆಹಲಿ: ಚಿನ್ನದ ಇಟಿಎಫ್ಗಳಿಂದ (ವಿನಿಮಯ ವಹಿವಾಟು ನಿಧಿ) ಬಂಡವಾಳ ಹೊರಹರಿವು ನಿರಂತರವಾಗಿದೆ.
ಹೂಡಿಕೆದಾರರು ಏಪ್ರಿಲ್ ತಿಂಗಳಿನಲ್ಲಿ ₹ 54 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆಗಳ ಒಕ್ಕೂಟ (ಎಎಂಎಫ್ಐ) ಮಾಹಿತಿ ನೀಡಿದೆ.
ಚಿನ್ನದ ನಿಧಿಗಳ ನಿರ್ವಹಣೆಯಲ್ಲಿ ಇರುವ ಸಂಪತ್ತು ಮೌಲ್ಯ ₹ 4,806 ಕೋಟಿಗಳಿಂದ ₹ 4,802 ಕೋಟಿಗಳಿಗೆ ಇಳಿಕೆಯಾಗಿದೆ.
‘ಷೇರುಪೇಟೆಯಲ್ಲಿ ಉತ್ತಮ ವಹಿವಾಟು ನಡೆಯುತ್ತಿರುವುದರಿಂದ ಚಿನ್ನದ ಇಟಿಎಫ್ ಬೆಡಿಕೆ ಕಳೆದುಕೊಂಡಿದೆ’ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.