ನವದೆಹಲಿ(ಪಿಟಿಐ): ಚಿನ್ನದ ಆಮದು ನಿಯಂತ್ರಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರದ ಕೈಜೋಡಿಸಬೇಕಿದ್ದು, ಚಿನ್ನದ ನಾಣ್ಯ ಮತ್ತು ಬಿಸ್ಕತ್‌ಗಳನ್ನು ಮಾರಾಟ ಮಾಡದಿರಿ ಎಂದು ತನ್ನ ಸದಸ್ಯರಿಗೆ `ಹರಳು ಮತ್ತು ಆಭರಣ ಮಾರಾಟಗಾರರ ಒಕ್ಕೂಟ'(ಜಿಜೆಎಫ್) ಸೂಚಿಸಿದೆ.
`ಸಿಎಡಿ' ಅಂತರ ಹಿಗ್ಗುತ್ತಿರುವುದು ಅರ್ಥವ್ಯವಸ್ಥೆಗೆ ತೊಡಕಾಗಿದೆ ಎಂಬುದು ನಮಗೂ ಮನದಟ್ಟಾಗಿದೆ. `ಸಿಎಡಿ' ತಗ್ಗಿಸುವ ಸಲುವಾಗಿ ಚಿನ್ನದ ಆಮದು ಕಡಿಮೆ ಮಾಡಬೇಕಿದೆ. ಹಾಗಾಗಿ ಆಭರಣದ ಹೊರತಾಗಿ ಚಿನ್ನದ ನಾಣ್ಯ ಮತ್ತು ಚಿನ್ನದ ಗಟ್ಟಿ ಮಾರಾಟ ಮಾಡದೇ ಇರಲು ನಿರ್ಧರಿಸಿದ್ದೇವೆ. ಈ ಸಂಬಂಧ ದೇಶದಾದ್ಯಂತದ ನಮ್ಮ 42,000 ಸದಸ್ಯರಿಗೂ ತಿಳಿಸಿದ್ದೇವೆ' ಎಂದು `ಜಿಜೆಎಫ್' ಅಧ್ಯಕ್ಷ ಹರೇಶ್ ಸೋನಿ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.