ADVERTISEMENT

ಚಿನ್ನ-ಬೆಳ್ಳಿ ದರ ದಾಖಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 18 ಮೇ 2012, 19:30 IST
Last Updated 18 ಮೇ 2012, 19:30 IST

ದೆಹಲಿ/ಮುಂಬೈ (ಪಿಟಿಐ): ಇಳಿಮುಖ ಹಾದಿಯಲ್ಲಿದ್ದ ಚಿನ್ನದ ಧಾರಣೆ ಮತ್ತೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಶುಕ್ರವಾರ ಸ್ಟಾಂಡರ್ಡ್ ಚಿನ್ನದ ಬೆಲೆ 10 ಗ್ರಾಂಗೆ  ದೆಹಲಿಯಲ್ಲಿ ರೂ700, ಮುಂಬೈನಲ್ಲಿ ರೂ670, ಚೆನ್ನೈನಲ್ಲಿ ರೂ605  ಏರಿಕೆಯಾಗಿದ್ದು ರೂ29 ಸಾವಿರದ ಗಡಿ ದಾಟಿದೆ. ಇದು ಈ ವರ್ಷದಲ್ಲಿ ಒಂದೇ ದಿನದಲ್ಲಿನ ಗರಿಷ್ಠ ಪ್ರಮಾಣದ ಬೆಲೆ ಏರಿಕೆಯಾಗಿದೆ.

ಶೇ 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ದೆಹಲಿ, ಮುಂಬೈ, ಚೆನ್ನೈ ಮಾರುಕಟ್ಟೆಯಲ್ಲಿ ಕ್ರಮವಾಗಿ ರೂ29,320 ಮತ್ತರೂು28,840 ಹಾಗೂ ರೂ28,980 ತಲುಪಿದೆ. ಬೆಳ್ಳಿ ಧಾರಣೆಯೂ ಕೆ.ಜಿಗೆ ಮುಂಬೈನಲ್ಲಿ ರೂ1,385, ದೆಹಲಿಯಲ್ಲಿ  ರೂ1,400 ಮತ್ತು ಚೆನ್ನೈನಲ್ಲಿ ರೂ1,200 ಏರಿಕೆ ಕಂಡಿದೆ.

ಯೂರೋಪ್ ಒಕ್ಕೂಟದ ಬಿಕ್ಕಟ್ಟಿನಿಂದ ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಿದೆ. ಧಾರಣೆ ದಿಢೀರ್ ಹೆಚ್ಚಲು ಪ್ರಮುಖ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಬೆಂಗಳೂರು: ಬೆಂಗಳೂರಿನಲ್ಲಿಯೂ ಶುಕ್ರವಾರ 10 ಗ್ರಾಂ  ಚಿನ್ನದ ಧಾರಣೆ ರೂ600ರಷ್ಟು ಏರಿಕೆ ಕಂಡು ರೂ29,252ಕ್ಕೆ ಮುಟ್ಟಿದೆ. ಬೆಳ್ಳಿ ಬೆಲೆ ಕೆ.ಜಿ.ಗೆ ರೂ1,600 ಹೆಚ್ಚಿದ್ದು, ರೂ54,200ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.