ಮುಂಬೈ/ನವದೆಹಲಿ (ಪಿಟಿಐ): ಬೇಡಿಕೆ ಕಡಿಮೆಯಾದ ಪರಿಣಾಮ ಚಿನ್ನದ ಬೆಲೆ ಶನಿವಾರ ಮತ್ತೆ ಅಲ್ಪ ಇಳಿಕೆ ಕಂಡಿದೆ. ಸ್ಟ್ಯಾಂಡರ್ಡ್ ಚಿನ್ನದ ಧಾರಣೆ 10 ಗ್ರಾಂಗಳಿಗೆ ನವದೆಹಲಿಯಲ್ಲಿ ರೂ.280, ಮುಂಬೈನಲ್ಲಿ ರೂ.260ರಷ್ಟು ಕಡಿಮೆ ಆಗಿದೆ. ಸಿದ್ಧ ಬೆಳ್ಳಿ ನವದೆಹಲಿಯಲ್ಲಿ ರೂ.1,600, ಮುಂಬೈನಲ್ಲಿ ರೂ.1,320ರಷ್ಟು ಇಳಿಯಿತು.
ನವದೆಹಲಿ ಧಾರಣೆ: ೧೦ ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರೂ.30,300ರಲ್ಲೂ, ಅಪರಂಜಿ ಚಿನ್ನ ರೂ.30,500ರಲ್ಲೂ ವಹಿವಾಟು ನಡೆಸಿತು. ಬೆಳ್ಳಿ ಕೆ.ಜಿ.ಗೆ ರೂ.49,500ರಲ್ಲಿ ಮಾರಾಟವಾಯಿತು.
ಮುಂಬೈ ಧಾರಣೆ: ಸ್ಟ್ಯಾಂಡರ್ಡ್ ಚಿನ್ನ ರೂ.30,000ಕ್ಕೂ, ಅಪರಂಜಿ ಚಿನ್ನ ರೂ.30,145ಕ್ಕೂ ಇಳಿಯಿತು. ಕೆ.ಜಿ. ಬೆಳ್ಳಿ ರೂ.50,275ರಲ್ಲಿ ಮಾರಾಟವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.