ADVERTISEMENT

‘ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್‌: ದರದಲ್ಲಿ ವ್ಯತ್ಯಾಸವಾಗದು’

ಪಿಟಿಐ
Published 26 ಮೇ 2018, 19:30 IST
Last Updated 26 ಮೇ 2018, 19:30 IST
ಸುಶೀಲ್‌ ಕುಮಾರ್ ಮೋದಿ
ಸುಶೀಲ್‌ ಕುಮಾರ್ ಮೋದಿ   

ಪಟ್ನಾ: ‘ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದರಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಆಗುವುದಿಲ್ಲ’ ಎಂದು ಬಿಹಾರ ಉಪ ಮುಖ್ಯಮಂತ್ರಿ ಮತ್ತು ಜಿಎಸ್‌ಟಿ ನೆಟ್‌ವರ್ಕ್ ಸಮಿತಿಯ ಮುಖ್ಯಸ್ಥ ಸುಶೀಲ್‌ ಕುಮಾರ್ ಮೋದಿ ಹೇಳಿದ್ದಾರೆ.

‘ಇಂಧನವನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ದರದಲ್ಲಿ ಕ್ರಮೇಣ ಇಳಿಕೆಯಾಗಲಿದೆ ಎನ್ನುವ ತಪ್ಪು ಭಾವನೆ ಜನರಲ್ಲಿ ಮೂಡಿದೆ’ ಎಂದು ತಿಳಿಸಿದ್ದಾರೆ.

‘ರಾಜ್ಯ ಮಟ್ಟದ ಬ್ಯಾಂಕರ್ಸ್‌ ಸಮಿತಿ (ಎಸ್‌ಎಲ್‌ಬಿಸಿ) ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆ, ಬೇಡವೆ ಎನ್ನುವುದನ್ನು ಜಿಎಸ್‌ಟಿ ಸಮಿತಿ ನಿರ್ಧರಿಸಲಿದೆ.

ADVERTISEMENT

‘ಹೊಸ ತೆರಿಗೆ ವ್ಯವಸ್ಥೆಯು ಸ್ಥಿರತೆ ಹಾದಿಗೆ ಮರಳದೇ ಪೆಟ್ರೋಲಿಯಂ ಉತ್ಪನ್ನಗಳನ್ನು ಅದರ ವ್ಯಾಪ್ತಿಗೆ ತರಬಾರದು ಎನ್ನುವುದು ಜಿಎಸ್‌ಟಿ ಸಮಿತಿಯ ಸರ್ವಾನುಮತದ ನಿರ್ಧಾರವಾಗಿದೆ’ ಎಂದು ಸುಶೀಲ್‌ ಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.