ADVERTISEMENT

ಜಿ-20 ಶೃಂಗಸಭೆ: ಪ್ರಧಾನಿ ಅಧ್ಯಕ್ಷತೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST

ನವದೆಹಲಿ (ಐಎಎನ್‌ಎಸ್):  ಫ್ರಾನ್ಸ್‌ನ ಕಾನ್ಸ್‌ನಲ್ಲಿ ನವೆಂಬರ್ 2ರಿಂದ 6ನೇ `ಜಿ-20~ ಶೃಂಗಸಭೆ ನಡೆಯಲಿದ್ದು, ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆ ವಹಿಸಲಿದ್ದಾರೆ.

ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಯೂರೋಪ್ ಸಾಲದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಈ ಬಾರಿಯ `ಜಿ-20~ ಶೃಂಗಸಭೆ ಮಹತ್ವ ಪಡೆದುಕೊಂಡಿದೆ. ಪ್ರವರ್ಥಮಾನಕ್ಕೆ ಬರುತ್ತಿರುವ ದೇಶಗಳು ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ಹೆಚ್ಚಿನ ಪರಿಣಾಮ ಎದುರಿಸತ್ತಿದ್ದು, ಜಾಗತಿಕ ನಾಯಕರು ಯೂರೋಪ್ ಬಿಕ್ಕಟ್ಟಿನ ಕುರಿತು ಮುಖ್ಯವಾಗಿ ಚರ್ಚೆ ನಡೆಸಲಿದ್ದಾರೆ.

ಕಳೆದ ಐದು ಶೃಂಗಸಭೆಗಳು ವಾಷಿಂಗ್ಟನ್, ಲಂಡನ್, ಪೀಟಸ್‌ರ್ಬ್, ಟೊರಂಟೊ, ಸಿಯೊಲ್‌ನಲ್ಲಿ ನಡೆದಿದ್ದವು.  ಕಾನ್ಸ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಪ್ರಧಾನಿ ಜತೆಗೆ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಕೂಡ ಭಾಗವಹಿಸಲಿದ್ದಾರೆ.

ಇದೇ ಮೊದಲ ಬಾರಿಗೆ `ಜಿ-20~ ಶೃಂಗಸಭೆಯಲ್ಲಿ ಯೂರೋಪ್ ಸಾಲದ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಯಲಿದೆ. ಈಗಾಗಲೇ ಯೂರೋಪ್ ಮುಖಂಡರಿಗೆ ಬಿಕ್ಕಟ್ಟು ಪರಿಹಾರ ಸೂತ್ರವೊಂದನ್ನು ಸಿದ್ಧಪಡಿಸಿ, ಸಭೆಯಲ್ಲಿ ಮಂಡಿಸುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.