ADVERTISEMENT

ಟಾಟಾ ಮೋಟರ್ಸ್‌ನ ‘ಇ–ಕಾರ್’

ಪಿಟಿಐ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST
ಟಾಟಾ ಸಮೂಹದ ವಿಶ್ರಾಂತ ಅಧ್ಯಕ್ಷ ರತನ್ ಟಾಟಾ ಮತ್ತು ಟಾಟಾ ಸನ್ಸ್‌ನ ಅಧ್ಯಕ್ಷ ಎನ್‌. ಚಂದ್ರಶೇಖರನ್‌ ಅವರು ವಿದ್ಯುತ್‌ ಚಾಲಿತ ಪರಿಕಲ್ಪನೆ ಕಾರನ್ನು ಪರಿಚಯಿಸಿದರು. – ಪಿಟಿಐ ಚಿತ್ರ
ಟಾಟಾ ಸಮೂಹದ ವಿಶ್ರಾಂತ ಅಧ್ಯಕ್ಷ ರತನ್ ಟಾಟಾ ಮತ್ತು ಟಾಟಾ ಸನ್ಸ್‌ನ ಅಧ್ಯಕ್ಷ ಎನ್‌. ಚಂದ್ರಶೇಖರನ್‌ ಅವರು ವಿದ್ಯುತ್‌ ಚಾಲಿತ ಪರಿಕಲ್ಪನೆ ಕಾರನ್ನು ಪರಿಚಯಿಸಿದರು. – ಪಿಟಿಐ ಚಿತ್ರ   

ಜಿನಿವಾ: ಭಾರತದ ವಾಹನ ತಯಾರಿಕಾ ಸಂಸ್ಥೆ ಟಾಟಾ ಮೋಟರ್ಸ್‌, ಇಲ್ಲಿ ನಡೆಯುತ್ತಿರುವ ವಾಹನ ಮೇಳದಲ್ಲಿ ವಿದ್ಯುತ್‌ಚಾಲಿತ ವಾಹನದ ಮಾದರಿಯನ್ನು ಪ್ರದರ್ಶಿಸಿದೆ.

ಸುಧಾರಿತ ಒಮೆಗಾ ತಂತ್ರಜ್ಞಾನ ಮತ್ತು ವಿದ್ಯುತ್‌ಚಾಲಿತ ವಾಹನಗಳ ವಿನ್ಯಾಸವನ್ನೊಳಗೊಂಡ ‘ಇ–ವಿಷನ್ ಸೆಡಾನ್’ ಪರಿಕಲ್ಪನೆಯ ಈ ವಾಹನವು ಏಳು ಸೆಕಂಡುಗಳಲ್ಲೇ 100 ಕಿ.ಮೀ ವೇಗ ಪಡೆದುಕೊಳ್ಳುತ್ತದೆ. ಗಂಟೆಗೆ ಗರಿಷ್ಠ 200 ಕೀ.ಮಿ ವೇಗದಲ್ಲಿ ಚಲಿಸಲಿದೆ ಎಂದು ಸಂಸ್ಥೆ ತಿಳಿಸಿದೆ.

‘ವಿದ್ಯುತ್‌ಚಾಲಿತ ವಾಹನಗಳ ತಯಾರಿಗೆ ನಮ್ಮ ಸಂಸ್ಥೆ ಬದ್ಧವಾಗಿದೆ. ಉತ್ತಮ ಭವಿಷ್ಯಕ್ಕಾಗಿ ಇಂತಹ ವಾಹನಗಳ ಅಗತ್ಯವಿದೆ’ ಎಂದು ಟಾಟಾ ಮೋಟರ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯುಂಟೆರ್ ಬಷೆಕ್‌ ತಿಳಿಸಿದ್ದಾರೆ.

ADVERTISEMENT

ಈ ವಾಹನದ ರಚನೆ, ವಿನ್ಯಾಸದ ಬಗೆಗಿನ ಪೂರ್ಣ ಮಾಹಿತಿಯನ್ನು ಸಂಸ್ಥೆಯು ನಂತರ ಪ್ರಕಟಿಸಲಿದೆ. 2022ರ ವೇಳೆಗೆ ವಾಹನವನ್ನು ರಸ್ತೆಗಿಳಿಸುವ ಸಾಧ್ಯತೆ ಇದೆ.

ಜಿನಿವಾ ವಾಹನ ಪ್ರದರ್ಶನದಲ್ಲಿ ಟಾಟಾ ಮೋಟರ್ಸ್‌ 20ನೇ ಬಾರಿಗೆ ಭಾಗವಹಿಸಿದ್ದು, ‘ಎಚ್‌5ಎಕ್ಸ್‌’ ಪರಿಕಲ್ಪನೆಯ ಐದು ಆಸನಗಳ ಎಸ್‌ಯುವಿ ಮತ್ತು ‘45ಎಕ್ಸ್‌’ ಪರಿಕಲ್ಪ‍ನೆಯ ಪ್ರೀಮಿಯಂ ವಾಹನಗಳನ್ನೂ ಪ್ರದರ್ಶಿಸಿದೆ. ಈ ಎರಡೂ ವಾಹನಗಳು ಭವಿಷ್ಯದಲ್ಲಿ ಸಂಸ್ಥೆಗೆ ಜಾಗತಿಕ ಮಟ್ಟದ ಉತ್ತಮ ಮಾರುಕಟ್ಟೆ ಒದಗಿಸಲಿವೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.