ADVERTISEMENT

ಟೊಯೊಟಾ ಬೆಂಗಳೂರು ಘಟಕ : ಆಗಸ್ಟ್ ತಿಂಗಳಿಂದ ಕಾರು ಎಂಜಿನ್ ತಯಾರಿಕೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2012, 19:30 IST
Last Updated 22 ಜುಲೈ 2012, 19:30 IST

ಚೆನ್ನೈ(ಪಿಟಿಐ): ಜಪಾನ್‌ನ ಪ್ರಮುಖ ವಾಹನ ತಯಾರಿಕಾ ಕಂಪೆನಿ `ಟೊಯೊಟಾ~ ತನ್ನ ಕಾರುಗಳ ಯಂತ್ರ ತಯಾರಿಕೆಯನ್ನು ಬೆಂಗಳೂರಿನಲ್ಲಿನ ಘಟಕದಲ್ಲಿ ಆಗಸ್ಟ್‌ನಲ್ಲಿ ಆರಂಭಿಸಲಿದೆ ಎಂದು `ಟೊಯೊಟಾ ಕಿರ್ಲೋಸ್ಕರ್~ ಕಂಪೆನಿಯ ಉಪ ವ್ಯವಸ್ಥಾಪಕ ನಿರ್ದೇಶಕ ಶೇಖರ್ ವಿಶ್ವನಾಥನ್ ಇಲ್ಲಿ ಭಾನುವಾರ ಹೇಳಿದರು.

`ಅಸೋಚಾಂ~ ಇಲ್ಲಿ ಆಯೋಜಿಸಿದ್ದ `ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ರಾಷ್ಟ್ರೀಯ ಸಮಾವೇಶ~ದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು, ಬೆಂಗಳೂರು ಘಟಕದಲ್ಲಿ ವಾರ್ಷಿಕ ಒಂದು ಲಕ್ಷ ಕಾರು ಎಂಜಿನ್ ಮತ್ತು 2.40 ಲಕ್ಷದಷ್ಟು ಟ್ರಾನ್ಸ್‌ಮಿಷನ್ ಯುನಿಟ್ಸ್ ತಯಾರಿಸುವ ಯೋಜನೆ ಇದೆ ಎಂದರು.

ಜಪಾನ್‌ನ `ಟೊಯೊಟಾ ಮೋಟಾರ್ ಕಾರ್ಪೊರೇಷನ್~ ಮತ್ತು ಬೆಂಗಳೂರಿನ `ಕಿರ್ಲೋಸ್ಕರ್ ಸಿಸ್ಟೆಮ್ಸ~ ಜಂಟಿ ಸಹಭಾಗಿತ್ವದ ಕಂಪೆನಿಯಾದ `ಟೊಯೊಟಾ ಕಿರ್ಲೋಸ್ಕರ್~ ಇತ್ತೀಚಿನ ಸೆಡಾನ್ ಮಾದರಿಯ `ಇಟಿಯೋಸ್~ ಮತ್ತು ಹ್ಯಾಚ್‌ಬ್ಯಾಕ್ ಶೈಲಿಯ `ಇಟಿಯೋಸ್ ಲಿವಾ~ ಕಾರುಗಳಿಗೆ ಅಗತ್ಯವಾದ ಎಂಜಿನ್ ತಯಾರಿಕೆ ಘಟಕವನ್ನು ಬೆಂಗಳೂರಿನಲ್ಲಿ ರೂ. 500 ಕೋಟಿ ವೆಚ್ಚದಲ್ಲಿ ಆರಂಭಿಸುವುದಾಗಿ ಕಳೆದ ವರ್ಷವೇ ಹೇಳಿದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.