ADVERTISEMENT

ಡಾಲರ್‌ ಎದುರು ರೂ 63.84 ಮೌಲ್ಯ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 19:59 IST
Last Updated 10 ಸೆಪ್ಟೆಂಬರ್ 2013, 19:59 IST

ಮುಂಬೈ(ಪಿಟಿಐ): ದೇಶದ ವಿದೇಶಿ ವಿನಿಮಯ ಮಾರು ಕಟ್ಟೆಯಲ್ಲಿ ರೂಪಾಯಿ ಮಂಗಳವಾರದ ವಹಿವಾಟಿ ನಲ್ಲಿ ಒಮ್ಮೆಲೇ ಹೆಚ್ಚಿನ ಮೌಲ್ಯ ಪಡೆದುಕೊಂಡಿತು. ಅಮೆರಿ ಕದ ಡಾಲರ್‌ ಎದುರು 140 ಪೈಸೆಗಳಷ್ಟು ಬೆಲೆ ಹೆಚ್ಚಿಸಿ ಕೊಂಡು ರೂ 63.84ರಲ್ಲಿ ವಿನಿಮಯಗೊಂಡಿತು.

ಇದು ಕಳೆದೊಂದು ವಾರ ದಲ್ಲಿಯೇ ಡಾಲರ್‌ ವಿರುದ್ಧ ರೂಪಾಯಿ ಒಂದೇ ದಿನದಲ್ಲಿ ಗಳಿಸಿದ ಅತ್ಯಧಿಕ ಮೌಲ್ಯ ವಾಗಿದೆ. ಇದಕ್ಕೂ ಮುನ್ನ ಆಗಸ್ಟ್‌ 29ರಂದು ಒಂದೇ ದಿನದಲ್ಲಿ 225 ಪೈಸೆಗಳಷ್ಟು ಮೌಲ್ಯ ಹೆಚ್ಚಿಸಿಕೊಂಡಿತ್ತು.

ಸಿರಿಯಾ ಮೇಲೆ ಅಮೆರಿಕ ಯುದ್ಧ ಸಾರುವ ಸಾಧ್ಯತೆ ಕ್ಷೀಣಿಸಿದ್ದು, ಇನ್ನೊಂದೆಡೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯೂ ಕಡಿಮೆ ಆಗಿದ್ದರಿಂದ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಗೆ ಶಕ್ತಿ ಬಂದಿತು. ಶುಕ್ರವಾರ ಒಂದು ಅಮೆರಿಕನ್‌ ಡಾಲರ್‌ಗೆ  65.24ರಂತೆ ವಿನಿಮಯವಾಗಿದ್ದರೆ, ಮಂಗಳವಾರದ ವಹಿವಾಟಿನಲ್ಲಿ ₨ 63.84ಕ್ಕೆ ಮೌಲ್ಯ ಹೆಚ್ಚಿಸಿಕೊಂಡಿತು.  ಕಳೆದ ನಾಲ್ಕು ವಹಿವಾಟುಗಳಲ್ಲಿ ರೂಪಾಯಿ ಒಟ್ಟಾರೆ 379 ಪೈಸೆಗಳಷ್ಟು ಶಕ್ತಿ ತಂದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.