ADVERTISEMENT

ತಲಾ ಆದಾಯ ಶೇ 17ರಷ್ಟು ಪ್ರಗತಿ ನಿರೀಕ್ಷೆ?

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 17:50 IST
Last Updated 16 ಫೆಬ್ರುವರಿ 2011, 17:50 IST

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ತಲಾ ಆದಾಯ ಶೇ 17ರಷ್ಟು ಹೆಚ್ಚಲಿದ್ದು 54,527 ತಲುಪಲಿದೆ ಎಂದು ಬುಧವಾರ ಬಿಡುಗಡೆಗೊಂಡಿರುವ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.

ಕಳೆದ ವರ್ಷ 46, 492 ಕೋಟಿ ತಲಾ ಆದಾಯ ಅಂದಾಜಿಸಲಾಗಿತ್ತು. ದೇಶದ ಒಟ್ಟು ಆದಾಯವನ್ನು ಒಟ್ಟು ಜನಸಂಖ್ಯೆಗೆ ವಿಭಾಗಿಸಿ ತಲಾ ಆದಾಯ ನಿರ್ಧರಿಸಲಾಗುತ್ತದೆ.  ಆದರೂ, 2004-05ನೇ ಸಾಲಿಗೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ  ಇದು ಶೇ 6ರಷ್ಟು ಮಾತ್ರ ಪ್ರಗತಿ ದಾಖಲಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.