ADVERTISEMENT

‘ತೆರಿಗೆ ಅಧಿಕಾರಿಗಳ ಬಗ್ಗೆ ಭಯ ಬೇಡ’

ಪಿಟಿಐ
Published 9 ಜುಲೈ 2017, 19:30 IST
Last Updated 9 ಜುಲೈ 2017, 19:30 IST
‘ತೆರಿಗೆ ಅಧಿಕಾರಿಗಳ ಬಗ್ಗೆ ಭಯ ಬೇಡ’
‘ತೆರಿಗೆ ಅಧಿಕಾರಿಗಳ ಬಗ್ಗೆ ಭಯ ಬೇಡ’   

ನವದೆಹಲಿ: ಸರ್ಕಾರದ ಒಪ್ಪಿಗೆ ಇಲ್ಲದೆ ತೆರಿಗೆ ಅಧಿಕಾರಿಗಳು, ವರ್ತಕರ ಅಂಗಡಿ ಆವರಣವನ್ನೂ ಪ್ರವೇಶಿಸುವಂತಿಲ್ಲ. ನಿಯಮ ಉಲ್ಲಂಘಿಸಿದರೆ ತೆರಿಗೆ ಇಲಾಖೆಗೆ ದೂರು ನೀಡಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಜಿಎಸ್‌ಟಿ ಹೆಸರಿನಲ್ಲಿ ತೆರಿಗೆ ಅಧಿಕಾರಿಗಳು ಎಂದು ಹೇಳಿಕೊಂಡು ವ್ಯಾಪಾರಸ್ಥರನ್ನು ಸುಲಿಗೆ ಮಾಡಿದ ಬಗ್ಗೆ  ದೂರುಗಳು ಬಂದಿರುವುದರಿಂದ ಸಚಿವಾಲಯ ಈ ಹೇಳಿಕೆ ನೀಡಿದೆ.

ತೆರಿಗೆ ಅಧಿಕಾರಿಗಳು ಎಂದು ಹೇಳಿಕೊಂಡು ಸುಲಿಗೆ ಮಾಡುವ ಅಥವಾ ಇನ್ಯಾವುದೇ ರೀತಿ ಕಿರುಕುಳ ನೀಡಿದರೆ ತೆರಿಗೆ ಇಲಾಖೆಯ ಸಹಾಯವಾಣಿ 011 –23370115 ಗೆ ಕರೆ ಮಾಡಿ ದೂರು ದಾಖಲಿಸುವಂತೆ ತಿಳಿಸಿದೆ.

ADVERTISEMENT

‘ವರ್ತಕರು ಮತ್ತು ಚಿಲ್ಲರೆ ವ್ಯಾಪಾರಸ್ಥರಿಗೆ ಜಿಎಸ್‌ಟಿಗೆ ವಲಸೆ ಬರಲು  ಅನುಕೂಲ ಮಾಡಿಕೊಡುವುದಷ್ಟೇ ತೆರಿಗೆ  ಇಲಾಖೆಯ ಉದ್ದೇಶವಾಗಿದೆ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.