ADVERTISEMENT

ದಿಢೀರ್ ರೂ. 630 ಕುಸಿದ ಚಿನ್ನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 19:59 IST
Last Updated 19 ಡಿಸೆಂಬರ್ 2012, 19:59 IST

ಮುಂಬೈ/ನವದೆಹಲಿ(ಪಿಟಿಐ): ದೇಶದ ಪ್ರಮುಖ ಚಿನಿವಾರ ಪೇಟೆಗಳಾದ ಮುಂಬೈ ಮತ್ತು ನವದೆಹಲಿಯಲ್ಲಿ ಬುಧವಾರ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಭಾರಿ ಕುಸಿತವಾಗಿದೆ. 10 ಗ್ರಾಂ ಚಿನ್ನ ಮುಂಬೈನಲ್ಲಿರೂ.630, ನವದೆಹಲಿಯಲ್ಲಿರೂ.500ರಷ್ಟು ಮೌಲ್ಯ ಕಳೆದುಕೊಂಡಿದೆ.

ಮುಂಬೈನಲ್ಲಿ 10 ಗ್ರಾಂ ಸ್ಟಾಂಡರ್ಡ್ ಚಿನ್ನರೂ. 30,540ಕ್ಕೂ, ಅಪರಂಜಿ ಚಿನ್ನರೂ.30,670ಕ್ಕೂ ಇಳಿಯಿತು. ಕೆ.ಜಿ. ಸಿದ್ಧ ಬೆಳ್ಳಿಯೂರೂ.1625ರಷ್ಟು ಕುಸಿದುರೂ.60,170ರಲ್ಲಿ ಮಾರಾಟವಾಯಿತು.

ನವದೆಹಲಿಯಲ್ಲಿ ಸ್ಟಾಂಡರ್ಡ್ ಚಿನ್ನರೂ.31,000, ಅಪರಂಜಿ ಚಿನ್ನರೂ.31,200ಕ್ಕೆ ಬಂದಿತು. ಕೆ.ಜಿ. ಬೆಳ್ಳಿರೂ.1300ರಷ್ಟು ಕುಸಿದುರೂ. 60,000ಕ್ಕೆ ಇಳಿಯಿತು. ಬೆಂಗಳೂರಿನಲ್ಲಿ ಸ್ಟಾಂಡರ್ಡ್ ಚಿನ್ನ 10 ಗ್ರಾಂಗಳಿಗೆರೂ.31,018ಕ್ಕೆ ಇಳಿದಿದೆ.

ದಿಢೀರ್ ಕುಸಿತವೇಕೆ?
ಅಮೆರಿಕದಲ್ಲಿನ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣುತ್ತಿರುವ ಸುದ್ದಿ ಕೇಳಿಬರುತ್ತಿದ್ದಂತೆಯೇ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆ ತಗ್ಗಿತು. ಜತೆಗೆ ಗ್ರೀಸ್‌ನ ಸಾಲ ಮೌಲ್ಯಮಾಪನ ಶ್ರೇಣಿ ಯಲ್ಲಿ(ರೇಟಿಂಗ್) ಏರಿಕೆ ಆಗಿರುವುದು ಯೂರೋಪ್ ವಲಯದಲ್ಲಿ ತನ್ನದೇ ಆದ ಪರಿಣಾಮ ತೋರಿದೆ. ಈ ಅಂಶಗಳು ಭಾರತದ ಚಿನಿವಾರ ಪೇಟೆ ಮೇಲೂ ಪ್ರಭಾವ ಬೀರಿವೆ. ಹಾಗಾಗಿ ಚಿನ್ನದ ಧಾರಣೆ ದಿಢೀರ್ ಕುಸಿದಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.