ನವದೆಹಲಿ (ಪಿಟಿಐ): `ದೀಪಾವಳಿ~ ಹತ್ತಿರವಾಗುತ್ತಿದ್ದಂತೆಯೇ ಚಿನ್ನದ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಇಲ್ಲಿನ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಸ್ಟಾಂಡರ್ಡ್ ಚಿನ್ನದ ಧಾರಣೆ ರೂ.350 ಹೆಚ್ಚಿದ್ದು ರೂ.31,700 ತಲುಪಿದೆ. ಬೆಳ್ಳಿ ಬೆಲೆಯೂ ಕೆ.ಜಿಗೆ ರೂ.1,500ರಷ್ಟು ಹೆಚ್ಚಿ ರೂ.60,500ಕ್ಕೇರಿದೆ.
ಬರಾಕ್ ಒಬಾಮ ಅಮೆರಿಕ ಅಧ್ಯಕ್ಷರಾಗಿ ಪುನರಾಯ್ಕೆಯಾದ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಧಾರಣೆ ಶೇ 0.8ರಷ್ಟು ಏರಿಕೆಯಾಗಿದ್ದು, ಲಂಡನ್ ಪೇಟೆಯಲ್ಲಿ ಪ್ರತಿ ಔನ್ಸ್‌ಗೆ 1,729 ಡಾಲರ್‌ಗೆ(2 ತಿಂಗಳ ಗರಿಷ್ಠ ಮಟ್ಟ) ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.