ADVERTISEMENT

ದೇಶದಲ್ಲಿ ಆರ್ಥಿಕ ಅಪರಾಧಗಳು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2016, 19:30 IST
Last Updated 2 ಆಗಸ್ಟ್ 2016, 19:30 IST
ದೇಶದಲ್ಲಿ ಆರ್ಥಿಕ  ಅಪರಾಧಗಳು
ದೇಶದಲ್ಲಿ ಆರ್ಥಿಕ ಅಪರಾಧಗಳು   

ಭಾರತದಲ್ಲಿ ಆರ್ಥಿಕ ಅಪರಾಧಗಳಿಂದ ಆಗುತ್ತಿರುವ ನಿಜವಾದ ಪರಿಣಾಮ ಏನು ಎನ್ನುವುದನ್ನು ಅಂದಾಜು ಮಾಡುವುದು ಕಷ್ಟ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಹಣಕಾಸು ನಷ್ಟವಾಗುತ್ತಿದೆ ಎನ್ನುವುದಷ್ಟೇ ಮೇಲ್ನೋಟಕ್ಕೆ ತಿಳಿದುಬರುತ್ತಿದೆ.

ವ್ಯವಹಾರಕ್ಕೆ ಆಗುತ್ತಿರುವ ಅಡ್ಡಿ, ಪರಿಹಾರ ಕ್ರಮಗಳು, ತನಿಖೆ ಮತ್ತು ಮುನ್ನೆಚ್ಚರಿಕಾ ಕ್ರಮಗಳು, ಕಾನೂನು ಹೋರಾಟಕ್ಕೆ ತಗಲುವ ವೆಚ್ಚ ಸೇರಿದಂತೆ ಇನ್ನಿತರ ವಿಷಯಗಳೂ ಪರಿಣಾಮ ಬೀರುತ್ತವೆ. ಅಲ್ಲದೆ ಇಂತಹ ವೆಚ್ಚಗಳೇ ಹೆಚ್ಚಿರುತ್ತವೆ. ಅದನ್ನು ಲೆಕ್ಕಹಾಕಲು ಸಾಧ್ಯವಾಗುವುದಿಲ್ಲವಷ್ಟೆ.

ಎರಡು ವರ್ಷಗಳಲ್ಲಿ ಭಾರತದಲ್ಲಿ  ನಡೆದಿರುವ ಆರ್ಥಿಕ ಅಪರಾಧಗಳ ಬಗ್ಗೆ ಬಹುರಾಷ್ಟ್ರೀಯ ವೃತ್ತಿ ಸೇವಾ ಸಂಸ್ಥೆ ಪ್ರೈಸ್‌ವಾಟರ್‌ಹೌಸ್‌ಕೂಪರ್‌ (ಪಿಡಬ್ಲ್ಯುಸಿ) ಅಧ್ಯಯನ ನಡೆಸಿ ನೀಡಿರುವ ವರದಿಯ ಕೆಲವು ಅಂಶಗಳ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

ಆಸ್ತಿ ದುರ್ಬಳಕೆಯು ಭಾರತದಲ್ಲಿ ಸಾಮಾನ್ಯವಾಗಿರುವಂತಹ ಆರ್ಥಿಕ ಅಪರಾಧವಾಗಿದೆ. ಇನ್ನು, ಲಂಚ ಪಡೆಯುವುದು, ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣಗಳೂ ನಡೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.