ADVERTISEMENT

ನೊವಾರ್ಟಿಸ್‌–ಜಿಎಸ್‌ಕೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2014, 19:30 IST
Last Updated 22 ಏಪ್ರಿಲ್ 2014, 19:30 IST

ಲಂಡನ್‌ (ಪಿಟಿಐ): ಎರಡು ಪ್ರಮುಖ ಬಹುರಾಷ್ಟ್ರೀಯ ಔಷಧ ಕಂಪೆನಿಗಳಾದ ನೊವಾರ್ಟಿಸ್‌ ಮತ್ತು ಗ್ಲ್ಯಾಕ್ಸೊಸ್ಮಿತ್‌ಕ್ಲೈನ್‌ (ಜಿಎಸ್‌ಕೆ) ಕಂಪೆನಿಗಳು ಮಹತ್ವದ ಒಪ್ಪಂದ ಮಾಡಿಕೊಂಡಿವೆ.

ಇದರ ಅನ್ವಯ ಸ್ವಿಟ್ಜರ್‌ಲೆಂಡ್‌ ಮೂಲದ ನೊವಾರ್ಟಿಸ್‌, ಕಂಪೆನಿಯು ಬ್ರಿಟನ್‌ ಮೂಲದ ಜಿಎಸ್‌ಕೆ ಕಂಪೆನಿಯ ಕ್ಯಾನ್ಸರ್‌ ಚಿಕಿತ್ಸಾ ಔಷಧಿ ಉತ್ಪಾದನಾ ವಿಭಾಗವನ್ನು 1600 ಕೋಟಿ ಡಾಲರ್‌ಗಳಿಗೆ (ಸುಮಾರು ₨96,000 ಕೋಟಿ ) ಖರೀದಿಸಲಿದೆ. ಇದೇ ವೇಳೆ ನೊವಾರ್ಟಿಸ್‌ ತನ್ನ ಲಸಿಕಾ ಉತ್ಪನ್ನಗಳ ವಿಭಾಗವನ್ನು ಜಿಎಸ್‌ಕೆ ಕಂಪೆನಿಗೆ 710 ಕೋಟಿ ಡಾಲರ್‌ಗಳಿಗೆ (ಸುಮಾರು ₨43,000 ಕೋಟಿ ) ಮಾರಾಟ ಮಾಡಲಿದೆ.

ಒಪ್ಪಂದದ ಮತ್ತೊಂದು ಭಾಗವಾಗಿ, ಈ ಎರಡೂ ಕಂಪೆನಿಗಳು ತಂತಮ್ಮ ಓವರ್‌ ದಿ ಕೌಂಟರ್ ಉತ್ಪನ್ನಗಳ (ವೈದ್ಯರ ಚೀಟಿ ಇಲ್ಲದೆಯೇ ಮಾರಾಟ ಮಾಡಬಹುದಾದ ಉತ್ಪನ್ನಗಳು) ಮಾರಾಟಕ್ಕೆ ಸಂಬಂಧಿಸಿದಂತೆ ಜಂಟಿ ಸಹಯೋಗ ಮಾಡಿಕೊಂಡಿವೆ. ಈ ಸಹಯೋಗದಡಿ ವಾರ್ಷಿಕ 100 ಕೋಟಿ ಡಾಲರ್‌ಗಳಷ್ಟು (ಸುಮಾರು 60,000 ಕೋಟಿ ರೂಪಾಯಿ) ಒಟಿಸಿ ಉತ್ಪನ್ನ ವಹಿವಾಟು ಸಾಧಿಸುವ ಗುರಿ ಹಾಕಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.