ADVERTISEMENT

ನೋಕಿಯಾ:ವಿಶ್ವಾಸಾರ್ಹ ಬ್ರಾಂಡ್

​ಪ್ರಜಾವಾಣಿ ವಾರ್ತೆ
Published 23 ಜನವರಿ 2011, 19:30 IST
Last Updated 23 ಜನವರಿ 2011, 19:30 IST

ಬೆಂಗಳೂರು:  ಮೊಬೈಲ್ ಸಾಧನ ತಯಾರಿಕೆ ಮತ್ತು ಮಾರಾಟದಲ್ಲಿ ಜಾಗತಿಕವಾಗಿ ಮೊದಲ ಸ್ಥಾನದಲ್ಲಿ  ಇರುವ   ನೋಕಿಯಾ ಸಂಸ್ಥೆಯು, ದೇಶದ ಅತ್ಯಂತ ವಿಶ್ವಸನೀಯ ಬ್ರಾಂಡ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಅಧ್ಯಯನವು ಅಚ್ಚರಿದಾಯಕ ಫಲಿತಾಂಶ ನೀಡಿದೆ. ಈ ವರದಿಯಲ್ಲಿ ದಕ್ಷಿಣ ಭಾರತದ ಜನಪ್ರಿಯ ಬ್ರಾಂಡ್‌ಗಳನ್ನೂ ಪಟ್ಟಿ ಮಾಡಲಾಗಿದೆ.ಮುಂಚೂಣಿ 100 ಸಂಸ್ಥೆಗಳಲ್ಲಿ ಅಡಿದಾಸ್ 10ನೇ ಮತ್ತು ರೇಮಂಡ್ 13ನೇ ಸ್ಥಾನದಲ್ಲಿ ಇದೆ.

 ಒಟ್ಟು 61 ಮಾನದಂಡಗಳನ್ನು ಆಧರಿಸಿ ವರದಿ ತಯಾರಿಸಲಾಗಿದೆ. ವರದಿ ಸಿದ್ಧಪಡಿಸುವಲ್ಲಿ ಕೋಲ್ಕತ್ತಾದ ಭಾರತೀಯ ವೈಜ್ಞಾನಿಕ ಸಂಸ್ಥೆಯ (ಐಎಸ್‌ಐ) ನೆರವು ಪಡೆಯಲಾಗಿದೆ ಎಂದು  ಪ್ರಮುಖ ಸಂಶೋಧನಾ ಸಂಸ್ಥೆ ಟ್ರಸ್ಟ್ ರಿಸರ್ಚ್ ಅಡ್ವೈಸರಿಯ ‘ಸಿಇಒ’ ಎನ್. ಚಂದ್ರಮೌಳಿ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೋಕಿಯಾ ಸೇರಿದಂತೆ ದೇಶದ 10 ಪ್ರಮುಖ ಹೆಚ್ಚು ವಿಶ್ವಾಸನೀಯ ಬ್ರಾಂಡ್‌ಗಳಲ್ಲಿ ಟಾಟಾ ಸಮೂಹ ಎರಡನೇ ಸ್ಥಾನ, ಜಪಾನಿನ ಎಲೆಕ್ಟ್ರಾನಿಕ್ಸ್ ದಿಗ್ಗಜ ಸೋನಿ -3 ಕೊರಿಯಾದ ಎಲ್‌ಜಿ ಮತ್ತು ಸ್ಯಾಮ್‌ಸಂಗ್ ಕ್ರಮವಾಗಿ 4 ಮತ್ತು 5, ರಿಲಯನ್ಸ್-6, ಮಾರುತಿ-7, ಎಲ್‌ಐಸಿ-8, ದೇಶದ ಅತಿದೊಡ್ಡ ಮೊಬೈಲ್ ಸೇವಾ ಕಂಪನಿ ಏರ್‌ಟೆಲ್-9 ಮತ್ತು ಟೈಟಾನ್ ಸಂಸ್ಥೆ ಯು 10ನೇ ಸ್ಥಾನದಲ್ಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.