ADVERTISEMENT

ಪೆಗಾಸಿಸ್ಟೆಮ್ಸ ಬೆಂಗಳೂರು ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 19:30 IST
Last Updated 16 ಆಗಸ್ಟ್ 2012, 19:30 IST

ಬೆಂಗಳೂರು: ಅಮೆರಿಕದ ಹೊರಗುತ್ತಿಗೆ (ಬಿಪಿಒ) ಕಂಪೆನಿ `ಪೆಗಾಸಿಸ್ಟೆಮ್ಸ~ ನಗರದ ಹೊರವಲಯ ಬೆಳ್ಳಂದೂರಿನ `ಪ್ರಿಟೆಕ್ ಎಸ್‌ಇಜೆಡ್~ನಲ್ಲಿ ತನ್ನ ಎರಡನೇ ಕಾರ್ಯನಿರ್ವಹಣೆ ಕೇಂದ್ರ ವನ್ನು ಆರಂಭಿಸಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲನ್ ಟ್ರೆಫ್ಲರ್, ಗುಣಮಟ್ಟದ ಸಿಬ್ಬಂದಿ ದೊರೆಯುವ ಕಾರಣದಿಂದಾಗಿಯೇ ಭಾರತ ನಮಗೆ ಆಕರ್ಷಕ ಎನಿಸಿದೆ.

ಪೆಗಾಸ್ಟಿಸ್ಟೆಮ್ಸನ ಬೆಂಗಳೂರು ಕೇಂದ್ರದಲ್ಲಿ ಸದ್ಯ 120 ಸಿಬ್ಬಂದಿ ಇದ್ದಾರೆ. ಮುಂಬರುವ ದಿನಗಳಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು. ಈ ಕೇಂದ್ರದಲ್ಲಿ 400 ಮಂದಿವರೆಗೂ ಕಾರ್ಯನಿರ್ವಹಿಸಬಹುದಾಗಿದೆ ಎಂದರು. ಪೆಗಾಸಿಸ್ಟಮ್ಸ ಈಗಾಗಲೇ ಹೈದರಾಬಾದ್‌ನಲ್ಲಿ ಭಾರತದ ಮೊದಲ ಕಚೇರಿಯನ್ನು ನೆಲೆಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.