ADVERTISEMENT

ಫೋಬ್ಸ್ ಪಟ್ಟಿಯಲ್ಲಿ 57 ಭಾರತೀಯ ಕಂಪೆನಿಗಳು

​ಪ್ರಜಾವಾಣಿ ವಾರ್ತೆ
Published 1 ಮೇ 2011, 19:30 IST
Last Updated 1 ಮೇ 2011, 19:30 IST

ವಾಷಿಂಗ್ಟನ್ (ಐಎಎನ್‌ಎಸ್): ರಿಲಯನ್ಸ್ ಇಂಡಸ್ಟ್ರೀಸ್, ಭಾರತೀಯ ಸ್ಟೇಟ್ ಬ್ಯಾಂಕ್, ಒಎನ್‌ಜಿಸಿ ಸೇರಿದಂತೆ 57 ಭಾರತೀಯ ಕಂಪೆನಿಗಳು ಫೋಬ್ಸ್   ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಮಾರಾಟ, ಲಾಭ, ಮಾರುಕಟ್ಟೆ ಮೌಲ್ಯ ಇತ್ಯಾದಿ ಅಂಶಗಳನ್ನು ಆಧರಿಸಿ ಫೋಬ್ಸ್ ನಿಯತಕಾಲಿಕೆಯು, ಜಾಗತಿಕ 2000 ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಶ್ರೇಣಿಯನ್ನು ಸಿದ್ಧಪಡಿಸಿದೆ.

ಭಾರತದ ಕಂಪೆನಿಗಳಲ್ಲಿ 45.3 ಶತಕೋಟಿ ಡಾಲರ್ ಮೌಲ್ಯದ ರಿಲಯನ್ಸ್ ಇಂಡಸ್ಟ್ರೀಸ್ 121ನೇ ಸ್ಥಾನ, 29.1 ಶತಕೋಟಿ ಡಾಲರ್  ಮೊತ್ತದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) 136ನೇ ಸ್ಥಾನ, 22.6 ಶತಕೋಟಿ ಡಾಲರ್  ಮೌಲ್ಯದ ಒಎನ್‌ಜಿಸಿ 172ನೇ ಸ್ಥಾನ ಪಡೆದಿವೆ.

ADVERTISEMENT

ಐಸಿಐಸಿಐ ಬ್ಯಾಂಕ್, ಎನ್‌ಟಿಪಿಸಿ, ಕೋಲ್‌ಇಂಡಿಯಾ, ಭಾರ್ತಿ ಏರ್‌ಟೆಲ್ ಎಲ್‌ಆಂಡ್‌ಟಿ, ಟಾಟಾ ಮೋಟಾರ್ಸ್ ಕೂಡ ಮೊದಲ 10 ಭಾರತೀಯ ಕಂಪೆನಿಗಳ ಪಟ್ಟಿಯಲ್ಲಿ ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.