ADVERTISEMENT

ಫೋರ್ಟಿಸ್‌ ಷೇರು ಖರೀದಿಗೆ ಮಲೇಷ್ಯಾ ಸಂಸ್ಥೆ ಉತ್ಸುಕ

ಪಿಟಿಐ
Published 13 ಏಪ್ರಿಲ್ 2018, 19:24 IST
Last Updated 13 ಏಪ್ರಿಲ್ 2018, 19:24 IST
ಫೋರ್ಟಿಸ್‌ ಷೇರು ಖರೀದಿಗೆ ಮಲೇಷ್ಯಾ ಸಂಸ್ಥೆ ಉತ್ಸುಕ
ಫೋರ್ಟಿಸ್‌ ಷೇರು ಖರೀದಿಗೆ ಮಲೇಷ್ಯಾ ಸಂಸ್ಥೆ ಉತ್ಸುಕ   

ನವದೆಹಲಿ: ಫೋರ್ಟಿಸ್‌ ಹೆಲ್ತ್‌ಕೇರ್‌ ಸಂಸ್ಥೆಯಲ್ಲಿ ಹೂಡಿಕೆ ಮಾಡಲು ಪ್ರಮುಖ ಸಂಸ್ಥೆಗಳು ಪೈಪೋಟಿಗೆ ಬಿದ್ದಿವೆ.

ಮಲೇಷ್ಯಾದ ಐಎಚ್‌ಎಚ್‌ ಹೆಲ್ತ್‌ಕೇರ್ ಸಂಸ್ಥೆ ಷೇರು ಖರೀದಿಗೆ ಆಸಕ್ತಿ ತೋರಿದೆ. ಪ್ರತಿ ಷೇರಿಗೆ ₹ 160ರವರೆಗೂ ಬೆಲೆ ನೀಡಲು ಸಿದ್ಧವಿರುವುದಾಗಿ ತಿಳಿಸಿದೆ. ಇದು ಮಣಿಪಾಲ್‌ ಹೆಲ್ತ್‌ ಎಂಟರ್‌ಪ್ರೈಸಸ್‌ ನೀಡಲು ಸಿದ್ಧವಿರುವ (₹155) ಬೆಲೆಗಿಂತಲೂ ಹೆಚ್ಚಿದೆ.

ಪ್ರತಿ ಷೇರಿಗೆ ₹ 156 ರಂತೆ ಒಟ್ಟಾರೆ ₹ 1,250 ಕೋಟಿಗಳನ್ನು ಜಂಟಿಯಾಗಿ ಹೂಡಿಕೆ ಮಾಡುವುದಾಗಿ ಹೀರೊ ಎಂಟರ್‌ಪ್ರೈಸಸ್‌ ಇನ್‌ವೆಸ್ಟ್‌ಮೆಂಟ್‌ ಮತ್ತು ಬರ್ಮನ್‌ ಫ್ಯಾಮಿಲಿ ಹೋಲ್ಡಿಂಗ್ಸ್‌ ಗುರುವಾರ ತಿಳಿಸಿದ್ದವು.

ADVERTISEMENT

ಯಾವುದೇ ಷರತ್ತು ವಿಧಿಸದೇ ಹೂಡಿಕೆಗೆ ಆಸಕ್ತಿ ಹೊಂದಿರುವುದಾಗಿ ಐಎಚ್‌ಎಚ್ ಹೆಲ್ತ್‌ಕೇರ್‌ ಸಂಸ್ಥೆಯು ಪತ್ರ ಬರೆದಿದೆ ಎಂದು ಫೋರ್ಟಿಸ್‌ ಸಂಸ್ಥೆಯು ಶುಕ್ರವಾರ ಷೇರುಪೇಟೆಗೆ ಮಾಹಿತಿ ನೀಡಿದೆ. ‘ಫೋರ್ಟಿಸ್‌ ಹೆಲ್ತ್‌ಕೇರ್ ಸಂಸ್ಥೆಯು ಗಂಭೀರವಾದ ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ದೂರದೃಷ್ಟಿ ಇರುವ ಮತ್ತು ಉತ್ತಮ ಕಾರ್ಯಾಚರಣಾ ಕೌಶಲ್ಯ ಹೊಂದಿರುವ ಪಾಲುದಾರನ ಅಗತ್ಯವಿದೆ’ ಎಂದು ಐಎಚ್‌ಎಚ್‌ ಹೆಲ್ತ್‌ಕೇರ್‌ನ ವ್ಯವಸ್ಥಾಪಕ ನಿರ್ದೇಶಕ ಟಾನ್‌ ಸೀ ಲೆಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.