ADVERTISEMENT

ಬಂಗಾರ ಆಮದು ಹೆಚ್ಚಳ ಸ್ಪಷ್ಟನೆ ಕೋರಿದ ‘ಆರ್‌ಬಿಐ’

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ನವದೆಹಲಿ(ಪಿಟಿಐ): ಚಿನ್ನ ಆಮದು ನಿಯಂತ್ರಿಸಲು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿ ಐ) ಸರ್ವ ಪ್ರಯತ್ನ ನಡೆಸು­ತ್ತಿದ್ದರೂ, ಚಿನ್ನದ ಆಮದು ಹೆಚ್ಚುತ್ತಲೇ ಇದೆ. ಆಗಸ್ಟ್‌ನಲ್ಲಿ ಮೂರು ಟನ್‌ಗೆ ಇಳಿದಿದ್ದ ಚಿನ್ನದ ಆಮದು, ಜನವರಿ­ಯಲ್ಲಿ ಮತ್ತೆ ಅನಿರೀಕ್ಷಿತವಾಗಿ 38 ಟನ್‌ಗಳಿಗೆ ಏರಿಕೆ ಕಂಡಿದೆ.

ಡಿಸೆಂಬರ್‌ನಲ್ಲಿ 25 ಟನ್‌ ಚಿನ್ನ ಆಮ ದಾಗಿತ್ತು. ನವೆಂಬರ್‌ಗೆ ಹೋಲಿಸಿ­ದರೆ ಇದು 19 ಟನ್‌ಗಳಷ್ಟು ಹೆಚ್ಚಿನದಾಗಿದೆ. ಆಮದು ಮಾಡಿಕೊಂಡ ಚಿನ್ನ­ದಲ್ಲಿ ಶೇ 20ರಷ್ಟನ್ನು ರಫ್ತು ಮಾಡ­ಬೇಕೆಂಬ ‘ಆರ್‌ಬಿಐ’ ನಿಯ­ಮದಿಂದ (80: 20 ಅನುಪಾತ) ಮತ್ತು ಆಮದು ಸುಂಕ ಶೇ 10ಕ್ಕೆ ಹೆಚ್ಚಿಸಿದ ಹಿನ್ನೆಲೆಯಲ್ಲಿ ಆಮದು ಸ್ವಲ್ಪ ತಗ್ಗಿತ್ತು.

ಆದರೆ, ಡಿಸೆಂಬರ್‌ ಮತ್ತು ಜನವರಿಯಲ್ಲಿ ಅನಿರೀಕ್ಷಿತ ಎನ್ನುವಂತೆ ಚಿನ್ನದ ಆಮದು ಹೆಚ್ಚಿದೆ. ಈ ಕುರಿತು ಸ್ಪಷ್ಟನೆ ನೀಡುವಂತೆ ‘ಆರ್‌ಬಿಐ’, ಚಿನ್ನ ಆಮದು ಮಾಡಿ­ಕೊಳ್ಳುವ ಸಂಸ್ಥೆಗಳಿಗೆ ಮತ್ತು ಬ್ಯಾಂಕು­ಗಳಿಗೆ ಸೂಚನೆ ನೀಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಾಲ್ತಿ ಖಾತೆ ಕೊರತೆಯನ್ನು (ಸಿಎಡಿ) 4,500 ಕೋಟಿ ಡಾಲರ್‌ಗಳಿಗೆ ತಗ್ಗಿಸುವ ಗುರಿ ಯನ್ನು ಸರ್ಕಾರ ನಿಗದಿ­ಪಡಿಸಿದೆ (ಕಳೆದ ಸಾಲಿನಲ್ಲಿ 8,820 ಕೋಟಿ ಡಾಲರ್‌­ಗಳಷ್ಟಿತ್ತು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.