ADVERTISEMENT

ಬಂಧನ್‌ ಬ್ಯಾಂಕ್‌ ಷೇರುಪೇಟೆಗೆ

ಪಿಟಿಐ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ಬಂಧನ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್‌ ಘೋಷ್‌ ಅವರು, ಮುಂಬೈ ಷೇರುಪೇಟೆಯಲ್ಲಿ ಜಾಗಟೆ ಬಾರಿಸುವ ಮೂಲಕ ಷೇರುವಹಿವಾಟಿಗೆ ಚಾಲನೆ ನೀಡಿದರು.
ಬಂಧನ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್‌ ಘೋಷ್‌ ಅವರು, ಮುಂಬೈ ಷೇರುಪೇಟೆಯಲ್ಲಿ ಜಾಗಟೆ ಬಾರಿಸುವ ಮೂಲಕ ಷೇರುವಹಿವಾಟಿಗೆ ಚಾಲನೆ ನೀಡಿದರು.   

ಮುಂಬೈ: ಬಂಧನ್‌ ಬ್ಯಾಂಕ್‌ನ ಷೇರುಪೇಟೆ ವಹಿವಾಟಿಗೆ ಮಂಗಳವಾರ ಚಾಲನೆ ನೀಡಲಾಯಿತು. ಆರಂಭದ ದಿನವೇ ಷೇರಿನ ಬೆಲೆ ಶೇ 33ರಷ್ಟು ಏರಿಕೆ ದಾಖಲಿಸಿ ಉತ್ತಮ ಆರಂಭ ಕಂಡಿತು.

ಮುಂಬೈ ಷೇರುಪೇಟೆಯಲ್ಲಿ, ನೀಡಿಕೆಯ ಬೆಲೆಯಾದ ₹ 375ರ ಬದಲಿಗೆ ₹ 485ರ ಮಟ್ಟದಲ್ಲಿ (ಶೇ 29.33) ವಹಿವಾಟಿಗೆ ಚಾಲನೆ ಪಡೆಯಿತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿಯಲ್ಲಿ ₹ 499ಕ್ಕೆ (ಶೇ 33) ಏರಿಕೆ ದಾಖಲಿಸಿತು.

₹ 4,473 ಕೋಟಿಗಳ ಆರಂಭಿಕ ಸಾರ್ವಜನಿಕ ಕೊಡುಗೆಗೆ 14 ಪಟ್ಟು ಬೇಡಿಕೆ ವ್ಯಕ್ತವಾಗಿತ್ತು. ಷೇರಿನ ಬೆಲೆ ಪಟ್ಟಿ ₹ 370 ರಿಂದ ₹ 375ಕ್ಕೆ ನಿಗದಿಪಡಿಸಲಾಗಿತ್ತು. ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯ ₹ 56,915 ಕೋಟಿಗಳಷ್ಟಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.